×
Ad

ಪಡುಬಿದ್ರೆ: ಸರಣಿ ಅಪಘಾತ; ಮೂವರಿಗೆ ಗಾಯ

Update: 2019-02-17 21:32 IST

ಪಡುಬಿದ್ರೆ, ಫೆ. 17: ಮೂರು ಕಾರುಗಳ ನಡುವೆ ನಡೆದ ಸರಣಿ ಅಪಘತದಲ್ಲಿ ಮೂವರು ಗಾಯಗೊಂಡ ಘಟನೆ ಕಾಪು ಠಾಣೆ ವ್ಯಾಪ್ತಿಯ ಮುದ್ದಣ ನರ್ಸರಿ ಬಳಿ ರವಿವಾರ ಸಂಜೆ ನಡೆದಿದೆ.

ಉಡುಪಿಯಿಂದ ಮಂಗಳೂರು ಕಡೆಗೆ ಸಂಚರಿಸುತಿದ್ದ ಮಾರುತಿ 800 ಕಾರು, ಶಿಫ್ಟ್ ಕಾರಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದ್ದು, ನಿಯಂತ್ರಣ ತಪ್ಪಿದ ಮಾರುತಿ 800 ಕಾರು ಬಲಭಾಗಕ್ಕೆ ಹೋಗಿ ಮಂಗಳೂರು ಕಡೆಯಿಂದ ಬರುತಿದ್ದ ಸ್ಕಾರ್ಪಿಯೋ ಕಾರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಮಾರುತಿ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಗಾಯಗೊಂಡವರ ಹೆಸರು ತಿಳಿದುಬಂದಿಲ್ಲ. ಈ ಬಗ್ಗೆ ಕಾಪು ಠಾಣೆಯಲ್ಲಿ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News