ಮಣಿಪಾಲ: ಫೆ.19ರಂದು ರಕ್ತ ಚಂದಿರ ವೀಕ್ಷಣೆ

Update: 2019-02-17 17:01 GMT

ಉಡುಪಿ, ಫೆ.17: ಪರ್ಕಳ ಮಾರ್ಕೇಟ್ ಫ್ರೆಂಡ್ಸ್ ವತಿಯಿದ ಮಣಿಪಾಲ ಎಂಐಟಿಯ ಉದ್ಯೋಗಿ ಆರ್.ಮನೋರ್ ಆವಿಷ್ಕರಿಸಿದ ಪಿವಿಸಿ ಪೈಪ್‌ನಿಂದ ರಚಿಸಲ್ಪಟ್ಟ ಟೆಲಿಸ್ಕೋಪ್‌ನಿಂದ ಬೃಹತ್ ಗಾತ್ರದ ಚಂದ್ರನನ್ನು(ರಕ್ತ ಚಂದಿರ) ಸಮೀಪದಲಿ್ಲ ನೋಡಲು ಅವಕಾಶ ಕಲ್ಪಿಸಲಾಗಿದೆ.

ಮಣಿಪಾಲದ ಸರಳೇಬೆಟ್ಟು ವಾರ್ಡ್‌ನ ವಿಜಯ ನಗರ ಕಾಲನಿಗೆ ಹೋಗುವ ದಾರಿ ಸಮೀಪ ಫೆ.19ರಂದು ಸಂಜೆ 5.30ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ವ್ಯವಸ್ಥೆ ಮಾಡಲಾಗಿದ್ದು, ರಕ್ತ ಚಂದಿರನ ವೀಕ್ಷಣೆಗೆ ಉಚಿತ ಅವಕಾಶ ಕಲ್ಪಿಸಲಾಗಿದೆ ಎಂದು ಕಾರ್ಯಕ್ರಮ ಸಂಘಟಕರಾದ ಗಣೇಶ್ ರಾಜ್ ಸರಳೇಬೆಟ್ಟು, ಎಂ.ರಾಜೇಶ್ ಪ್ರಭು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News