ಸಿಖ್ ಮೇಲೆ ಹಲ್ಲೆ: ಅಮೆರಿಕನ್ ಬಂಧನ

Update: 2019-02-17 17:18 GMT

ನ್ಯೂಯಾರ್ಕ್, ಫೆ. 17: ಕ್ಯಾಲಿಫೋರ್ನಿಯದಲ್ಲಿ ಸಿಖ್ ವ್ಯಕ್ತಿಯೋರ್ವರನ್ನು ಮುಸ್ಲಿಮ್ ಎಂಬುದಾಗಿ ಭಾವಿಸಿ ಅವರ ಮುಖಕ್ಕೆ ಗುದ್ದಿ, ಅವರ ಮೇಲೆ ಬಿಸಿ ಕಾಫಿ ಚೆಲ್ಲಿದ ವ್ಯಕ್ತಿಯನ್ನು ದ್ವೇಷಾಪರಾಧ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಜಾನ್ ಕ್ರೇನ್ ಮ್ಯಾರಿಸ್‌ವಿಲ್‌ ನಲ್ಲಿ ಬುಧವಾರ ಮುಂಜಾನೆ 2 ಗಂಟೆಯ ಸುಮಾರಿಗೆ ಅಂಗಡಿಯೊಂದರಲ್ಲಿ ಸಿಖ್ ಸಿಬ್ಬಂದಿಯ ಮೇಲೆ ಬಿಸಿ ಕಾಫಿ ಎಸೆದು ಹಲ್ಲೆ ನಡೆಸಿದ್ದಾನೆ ಎಂದು ‘ಸ್ಯಾಕ್ರಮೆಂಟೋ ಬೀ’ ಪತ್ರಿಕೆ ವರದಿ ಮಾಡಿದೆ.

ಆರೋಪಿಯು ಅಂಗಡಿಯಲ್ಲಿ ಒಂದು ಲೋಟ ಕಾಫಿಯನ್ನು ಸ್ವತಃ ತಯಾರಿಸಿ ಹಣ ಕೊಡದೆ ಹೋಗಲು ಪ್ರಯತ್ನಿಸುವುದನ್ನು ತಡೆದಾಗ ನನ್ನ ಮೇಲೆ ಹ್ಲಲೆ ನಡೆಸಿದನು ಎಂದು ಸಿಖ್ ವ್ಯಕ್ತಿ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News