ವೈಟ್‌ಡೌಸ್:ನಿರಾಶ್ರಿತರ ಆಶ್ರಯ ತಾಣದ ಉದ್ಘಾಟನೆ

Update: 2019-02-17 17:32 GMT

ಮಂಗಳೂರು, ಫೆ.17: ನಗರ ಹೊರವಲಯದ ಮರೋಳಿ-ಕುಲಶೇಖರದಲ್ಲಿ ವೈಟ್‌ಡೌಸ್ ಸಂಸ್ಥೆಯ 200 ಹಾಸಿಗೆಗಳ ಮನೋರೋಗಿಗಳ ಶುಶ್ರೂಷೆ ಹಾಗೂ ನಿರಾಶ್ರಿತರ ಆಶ್ರಯ ತಾಣದ ಉದ್ಘಾಟನೆಯ ರವಿವಾರ ನೆರವೇರಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮನೋರೋಗಿಗಳ ಶುಶ್ರೂಷೆ ಹಾಗೂ ನಿರಾಶ್ರಿತರಿಗೆ ಆಶ್ರಯ ನೀಡುವ ವೈಟ್‌ಡೌಸ್ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಸರಕಾರಕ್ಕೆ ಮಾದರಿಯಾಗುವ ಕೆಲಸ ಮಾಡುತ್ತಿದೆ ಎಂದರು.

ಆಶ್ರಯ ತಾಣ ನಿರಾಶ್ರಿತರಿಗೆ ನೆಮ್ಮದಿಯ ಜೀವನ ನಡೆಸುವಲ್ಲಿ ಸಹಕಾರಿಯಾಗಿದೆ. ನಗರಾಭಿವೃದ್ಧಿ, ವಸತಿ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ನಗರ ಪ್ರದೇಶದಲ್ಲಿ ಕಾರ್ಮಿಕರಿಗೆ, ಬಡವರಿಗೆ ಸೂರು ಒದಗಿಸಲು ಶೆಲ್ಟರ್ ಹೋಮ್ ನಿರ್ಮಾಣ ಮಾಡುವ ಉದ್ದೇಶ ಸರಕಾರದ ಮುಂದಿದೆ. ವೈಟ್ ಡೌಸ್‌ನಂತಹ ಸಂಸ್ಥೆಗಳಿಗೆ ಸರಕಾರದಿಂದ ಸಹಾಯ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಯು.ಟಿ.ಖಾದರ್ ಹೇಳಿದರು.

ದಾನಿ ಲೆಸ್ಲಿ ರ್ನಾಂಡಿಸ್ ಕಟ್ಟಡ ಉದ್ಘಾಟಿಸಿದರು. ವಿಶ್ರಾಂತ ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಆಶೀರ್ವಚನ ನೀಡಿದರು.
ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ದಾನಿಗಳಾದ ಲೆಸ್ಲಿ ರ್ನಾಂಡಿಸ್, ರೊನಾಲ್ಡ್ ಪಿಂಟೊ, ಬೆನೆಡಿಕ್ಟ್ ಬರ್ಬೋಜಾ, ಮೈಕಲ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

ಕಂದಾಯ ಇಲಾಖೆ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ, ಮಾಜಿ ಶಾಸಕ ಜೆ.ಆರ್.ಲೋಬೊ, ಟ್ರಸ್ಟಿ ವೈಟಸ್ ರೆಸ್ಕಿನ್ಹಾ, ಸುನಿಲ್ ಬಾಳಿಗಾ, ವ್ಯವಸ್ಥಾಪಕ ಜೆರಾಲ್ಡ್ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಕೋರಿನ್ ರೆಸ್ಕಿನ್ಹಾ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News