ಉಳ್ಳಾಲ ಮುಸ್ಲಿಂ ಜಮಾಅತ್‌ನಿಂದ ಖಂಡನಾ ಸಭೆ

Update: 2019-02-17 17:34 GMT

ಮಂಗಳೂರು, ಫೆ.17: ಭಾರತ ಸರಕಾರ ಮುಕ್ತ ಅವಕಾಶ ನೀಡಿದಲ್ಲಿ ಉಳ್ಳಾಲದ ಐದು ಸಾವಿರಕ್ಕೂ ಹೆಚ್ಚು ಕಾಶ್ಮೀರಕ್ಕೆ ತೆರಳಿ ಸೈನಿಕರಿಗೆ ಬಲ ತುಂಬಲು ಸದಾ ಸಿದ್ಧರಾಗಿ ನಿಂತಿದ್ದಾರೆ ಎಂದು ಉಳ್ಳಾಲ ಮುಸ್ಲಿಂ ಜಮಾಅತ್ ಮುಖಂಡ ಅಯೂಬ್ ಮಂಚಿಲ ಹೇಳಿದರು.

ಆತ್ಮಹತ್ಯಾ ದಾಳಿ ಮೂಲಕ ಸೈನಿಕರನ್ನು ಕೊಂದ ಉಗ್ರರ ಕೃತ್ಯ ಖಂಡಿಸಿ ಉಳ್ಳಾಲ ಮುಸ್ಲಿಂ ಜಮಾಅತ್ ವತಿಯಿಂದ ರವಿವಾರ ಉಳ್ಳಾಲ ಅಬ್ಬಕ್ಕ ವೃತ್ತದಲ್ಲಿ ನಡೆದ ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.

ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ಉಳ್ಳಾಲ ಮುಸ್ಲಿಂ ಜಮಾಅತ್ ಸಂಚಾಲಕ ಯು.ಕೆ.ಯೂಸುಫು ಉಳ್ಳಾಲ್, ಫಾರೂಕ್ ಉಳ್ಳಾಲ್, ಪ್ರಮುಖರಾದ ಅಬ್ಬಾಸ್ ಕೋಟೆಪುರ, ಇಸ್ಮಾಯಿಲ್ ಪೊಡಿಮೋನು, ಯು.ಕೆ.ನಝೀರ್, ಎ.ಆರ್.ಅಬ್ಬಾಸ್, ಅನ್ವರ್ ಇಮ್ತಿಯಾಝ್, ಮುಹಮ್ಮದ್ ಮೂಸ, ಎಲ್.ಕೆ.ಲತೀಫ್, ಜಬ್ಬಾರ್ ಮೇಲಂಗಡಿ, ಝಾಕೀರ್ ಹುಸೈನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News