ಪಿಎಫ್ಐ ಸಂಸ್ಥಾಪನಾ ದಿನಾಚರಣೆ: ಪುತ್ತೂರು ತಾಲ್ಲೂಕಿನಾದ್ಯಂತ ಧ್ವಜಾರೋಹಣ ಕಾರ್ಯಕ್ರಮ

Update: 2019-02-17 17:42 GMT

ಪುತ್ತೂರು, ಫೆ. 17: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಪಿ.ಎಫ್.ಐ ಪುತ್ತೂರು ಜಿಲ್ಲಾ ಕಚೇರಿ ಮುಂಭಾಗದಲ್ಲಿ  ನಡೆಯಿತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾಧ್ಯಕ್ಷರಾದ ಅಬೂಬಕರ್ ರಿಝ್ವಾನ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಧ್ವಜಾರೋಹಣಗೈದರು. ಮುಖ್ಯ ಅತಿಥಿಯಾಗಿ ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಈ ದಿನವೂ  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 13ನೇ ಸಂಸ್ಥಾಪನಾ ದಿನವಾಗಿ ಗುರುತಿಸಿಕೊಳ್ಳುತ್ತಿದೆ. ಈ ಆಂದೋಲನವು 12 ವರ್ಷಗಳ ಸಫಲ ಯಾತ್ರೆಯ ಮೂಲಕ ಸಾಗಿತ್ತು. ಅದು ಭಾರತದ ಜನರ ವಿಶೇಷವಾಗಿ ಸಮಾಜದ ಮೂಲೆಗೆಸೆಯಲ್ಪಟ್ಟ ಮತ್ತು ಹಿಂದುಳಿದ ವರ್ಗಗಳ ಸೇವೆಗಾಗಿ ಶ್ರಮಿಸಿತ್ತು. ಇದು ದೇಶದಲ್ಲಿ ಸಕಾರಾತ್ಮಕ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಜನರಿಗಾಗಿ ಮತ್ತು ಜನರಿಂದ ನಡೆಸಲ್ಪಡುವ ಆಂದೋಲನವಾದ್ದರಿಂದ, ಸಮಾಜ ಮತ್ತು ದೇಶ ಎದುರಿಸುತ್ತಿರುವ ಸಮಕಾಲೀನ ಸವಾಲನ್ನು ನಮ್ಮಿಂದ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಪುಲ್ವಾಮದಲ್ಲಿ ನಡೆದ ದುಷ್ಕರ್ಮಿಗಳಿಂದ ಹುತಾತ್ಮರಾದ ಯೋಧರಿಗಾಗಿ  ಮೌನ ಪ್ರಾರ್ಥನೆ ಸಲ್ಲಿಸಿ, ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಲವಾರು ನಾಯಕರು ಉಪಸ್ಥಿತರಿದ್ದರು. ಉಸ್ಮಾನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ   ಧ್ವಜಾರೋಹಣ ಕಾರ್ಯಕ್ರಮವು ಪುತ್ತೂರು ತಾಲ್ಲೂಕಿನ ಹಲವಾರು ನಗರಗಳಲ್ಲಿ ಕುಂಬ್ರ, ಸಂಟ್ಯಾರ್, ಈಶ್ವರಮಂಗಲ, ಅಂಕತ್ತಡ್ಕ, ಕಬಕ, ಮುರ, ಪರ್ಲಡ್ಕ, ಕೂರ್ನಡ್ಕ,  ಮುಕ್ರಂಪಾಡಿ, ಬನ್ನೂರು, ಸಾಲ್ಮರ, ಪುರುಷರಕಟ್ಟೆ, ಸವಣೂರು ಬಡಕ್ಕೋಡಿ ಮುಂತಾದ ಹಲವಾರು ಸ್ಥಳಗಳಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News