ಮಂಗಳೂರು: ಶೆಫರ್ಡ್ಸ್ ಇಂಟರ್‌ನ್ಯಾಷನಲ್ ಅಕಾಡೆಮಿ ವಾರ್ಷಿಕೋತ್ಸವ

Update: 2019-02-18 07:54 GMT

ಮಂಗಳೂರು, ಫೆ.18: ನಗರದ ಪುರಭವನದಲ್ಲಿ ಶೆಫರ್ಡ್ಸ್ ಇಂಟರ್‌ ನ್ಯಾಷನಲ್ ಅಕಾಡಮಿಯ ದ್ವಿತೀಯ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು.

ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆಯೊಂದಿಗೆ ಸಂತಾಪ ಸೂಚಿಸಲಾಯಿತು.

ಶೆಫರ್ಡ್ಸ್ ಇಂಟರ್‌ ನ್ಯಾಷನಲ್ ಅಕಾಡಮಿಯ ಪೋಷಕ ಹಾಗೂ ಎ.ಕೆ. ಸಮೂಹ ಕಂಪನಿಗಳ ಆಡಳಿತ ನಿರ್ದೇಶಕ ಎ.ಕೆ. ನಿಯಾಝ್, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಂಸ್ಥೆಯ ಟ್ರಸ್ಟಿಗಳಾದ ಡಾ. ಸೈಯದ್ ಹಬೀಬ್, ಅಥರ್ ಖಾನ್, ಸಲಹೆಗಾರ ಎಸ್.ಎಂ. ಬಶೀರ್, ಎನ್‌ಆರ್‌ಐಗಳಾದ ಸೈಯದ್ ನೂರುಲ್ಲಾ, ಸೈಯದ್ ರಫೀಕ್ ಕುವೈತ್ ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಾರ್ಷಿಕೋತ್ಸವದ ಅಂಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಭಾಷಣ, ಪ್ರಿನ್ಸ್ ಮತ್ತು ಪ್ರಿನ್ಸೆಸ್, ಖಿರಾಅತ್, ಛದ್ಮವೇಷ, ರಸಪ್ರಶ್ನೆ, ಗಾಯನ ಮತ್ತು ಕಸದಿಂದ ರಸ ಮೊದಲಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶೆಫರ್ಡ್ಸ್ ಸಂಸ್ಥೆಯಿಂದ ಪರಿಸರ ಸಹ್ಯ ಹೊಸ ಕ್ಯಾಂಪಸ್

ಮಂಗಳೂರಿನ ಅರ್ಕುಳದ 3.7 ಎಕರೆ ವಿಶಾಲವಾದ ಪ್ರದೇಶದಲ್ಲಿ ಶೆಫರ್ಡ್ಸ್ ಸಂಸ್ಥೆಯ ಪರಿಸರ ಸಹ್ಯ ಹೊಸ ಕ್ಯಾಂಪಸ್ ನಿರ್ಮಾಣವಾಗಲಿದೆ. ಇಲ್ಲಿ ಅತ್ಯಧುನಿಕ ಮೂಲಭೂತ ಸೌಕರ್ಯಗಳಿಂದ ಕೂಡಿದ ತರಗತಿ ಕೊಠಡಿಗಳು ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಲ್ಲದೆ ಮಾ. 3ರಂದು ಶೆಫರ್ಡ್ಸ್ ಫೆಸ್ಟ್ (ಉತ್ಸವ) ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ನಾಸಿರ್ ಸಮಾರಂಭದಲ್ಲಿ ಮಾಹಿತಿ ನೀಡಿದರು.

ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿ ಹಸನ್ ಯೂಸುಫ್, ಪ್ರಾಂಶುಪಾಲರಾದ ಅಸ್ಮಾ ಸೈಯದ್ ಉಪಸ್ಥಿತರಿದ್ದರು. 

ಪುಟಾಣಿ ವಿದ್ಯಾರ್ಥಿಗಳಾದ ಉವೈಸ್, ಝಮಾನ್ ಮತ್ತು ತಬಿಶ್ ಕಾರ್ಯಕ್ರಮ ನಿರೂಪಿಸಿದರು. ಲುಬೈನಾ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿ ಝಿಲಾ ಝೈನಬ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News