ಪುಲ್ವಾಮದಲ್ಲಿ ಸೈನಿಕರ ಹತ್ಯೆ: ಫರಂಗಿಪೇಟೆ ರಿಕ್ಷಾ ಚಾಲಕರಿಂದ ಸಂತಾಪ, ಖಂಡನಾ ಸಭೆ

Update: 2019-02-18 08:09 GMT

ಫರಂಗಿಪೇಟೆ, ಪೆ. 18: ಶ್ರೀನಗರದ ಪುಲ್ವಾಮದಲ್ಲಿ ಸೈನಿಕರ ಮೇಲೆ ಉಗ್ರಗಾಮಿಗಳು ಭಯೋತ್ಪಾದನಾ ದಾಳಿ ನಡೆಸಿ 40 ಸೈನಿಕರ ಹತ್ಯೆ ನಡೆಸಿದ್ದನ್ನು ಖಂಡಿಸಿ ಹುತಾತ್ಮ ಸೈನಿಕರಿಗೆ ಸಂತಾಪ ಸೂಚಕ ಸಭೆಯೂ ನಂ1 ರಿಕ್ಷಾ ಚಾಲಕ ಮಾಲಕರ ಸಂಘ ಫರಂಗಿಪೇಟೆ ವತಿಯಿಂದ ರಿಕ್ಷಾ ಪಾರ್ಕ್ ನಲ್ಲಿ  ರವಿವಾರ ಸಂಜೆ ನಡೆಯಿತು.

ಕ್ಯಾಂಡಲ್ ಹೊತ್ತಿಸಿ, ಘೋಷಣೆ ಕೂಗಿ ಸಂತಾಪ ವ್ಯಕ್ತಪಡಿಸಿ, ಭಯೋತ್ಪಾದನಾ ಕೃತ್ಯವನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂ ಮಾಜಿ ಸದಸ್ಯ ಉಮರ್ ಫಾರೂಕು ದೇಶಕ್ಕಾಗಿ ರಾತ್ರಿ ಹಗಲೆನ್ನದೆ ಸೇವೆಸಲ್ಲಿಸುವ ಜವಾನರ ಮೇಲೆ ನಡೆದ ಈ ಕೃತ್ಯವನ್ನು ಖಂಡಿಸಿದ ಅವರು ಹತಾತ್ಮ ಯೋದರ ಕುಟುಂಬಕ್ಕೆ ಸಾಂತ್ವಾನ ದೊರಕಲಿ ಎಂದು ಹಾರೈಸಿದರು.

ಪಾಪ್ಯುಲರ್ ಫ್ರಂಟ್ ಬಂಟ್ವಾಳ ಪ್ರಧಾನ ಕಾರ್ಯದರ್ಶಿ ಸಲೀಮ್ ಕುಂಪನಮಜಲ್ , ಸೇವಾಂಜಲಿ ಪ್ರತಿಷ್ಟಾನ ಟ್ಪಸ್ಟಿ ಕೃಷ್ಣಕುಮಾರ್ ಪೂಂಜ, ಪುದು ಗ್ರಾಪಂ ಅಧ್ಯಕ್ಷ, ರಿಕ್ಷಾ ಚಾಲಕ ಮಾಲಕರ ಗೌರವಾಧ್ಯಕ್ಷ ರಮ್ಲಾನ್ ಈ ಸಂದರ್ಭದಲ್ಲಿ ಮಾತನಾಡಿದರು.

ನಂ1 ರಿಕ್ಷಾ ಚಾಲಕ ಮಾಲಕರ ಸಂಘ ಫರಂಗಿಪೇಟೆ ಅಧ್ಯಕ್ಷ ಜಾಫರ್ ಸುಜೀರ್ ಸಭೆಯ ನೇತೃತ್ವವನ್ನು ವಹಿಸಿದರು. ಅಮೆಮಾರ್ ಮಸೀದಿ ಅಧ್ಯಕ್ಷ ಉಮರಬ್ಬ, ಫರೆಗಿಪೇಟೆ ಮಸೀದಿ ಅಧ್ಯಕ್ಷ ಮೊಹಮ್ಮದ್ ಬಾವ, ಮಾಜಿ ಅಧ್ಯಕ್ಷ ಹನೀಫ್, ಸದಸ್ಯರಾದ ಇಕ್ಬಾಲ್ ಸುಜೀರ್, ನಝೀರ್ ಹತ್ತನೇ ಮೈಲ್ ಕಲ್ಲು, ಎಸ್.ಡಿ.ಪಿ.ಐ ಪುದು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್, ಪುದು ಯೂತ್ ಕಾಂಗ್ರೆಸ್ ವಲಯಾಧ್ಯಕ್ಷ ರಫೀಕ್ ಪೇರಿಮಾರ್, ಮಹೇಶ್, ಮಜೀದ್, ಮನ್ಸೂರು ಸುಪರ್, ಜಮಾಲುದ್ದೀನ್, ರಿಕ್ಷಾ ಚಾಲಕರ ಸಂಘದ ಕಾರ್ಯದರ್ಶಿ ಇನ್ಸಾದ್, ಕೋಶಾಧಿಕಾರಿ ಸುಲೈಮಾನ್ ಕೆ, ಸದಸ್ಯರಾದ ಚಂದಪ್ಪ, ಅನ್ವರ್ ಅರ್ಕುಳ ಮತ್ತಿತರರು ಉಪಸ್ಥಿತರಿದ್ದರು.

ಖಾದರ್ ಅಮೆಮಾರ್ ಸ್ವಾಗತಿಸಿ, ಅಶ್ರಫ್ ಮಳ್ಳಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News