ಜನರ ಆಡಳಿತವಿದ್ದಾಗ ಮಾನವ ಹಕ್ಕುಗಳ ರಕ್ಷಣೆ: ನ್ಯಾ. ಡಿ.ಎಚ್. ವಾಘೇಲ

Update: 2019-02-18 11:29 GMT

ಮಂಗಳೂರು, ಫೆ.18: ಪ್ರಜಾಪ್ರಭುತ್ವದಲ್ಲಿ ಆಡಳಿತವೆಂಬುದು ವ್ಯಕ್ತಿಯೊಬ್ಬನಿಂದ ನಡೆಸಲ್ಪಡುವುದಲ್ಲ. ಅದು ಜನರಿಂದ ಆಯ್ಕೆ ಮಾಡಲ್ಪಟ್ಟ ಪ್ರತಿನಿಧಿಯು ಜನರ ಆಶೋತ್ತರಗಳಿಗೆ ಪೂರಕವಾಗಿ ಆಡಳಿತ ನಡೆಸುವಂತಾದಾಗ ಮಾತ್ರವೇ ಮಾನವ ಹಕ್ಕುಗಳ ರಕ್ಷಣೆ ಸಾಧ್ಯ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಿ.ಎಚ್. ವಾಘೇಲ ಅಭಿಪ್ರಾಯಿಸಿದ್ದಾರೆ.

ನಗರದ ಸಂತ ಆಗ್ನೆಸ್ ಕಾಲೇಜಿನಲ್ಲಿ ಇಂದು ರಾಜಕೀಯ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಮಾನವ ಹಕ್ಕುಗಳ ಮೂಲಭೂತ ವಿಷಯಗಳ ಕುರಿತಂತೆ ಆಯೋಜಿಸಲಾದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜನರು ಆಯ್ಕೆ ಮಾಡುವ ಜನ ಪ್ರತಿನಿಧಿಯು ಜನರಿಗೆ ತಕ್ಕುದಾದ ರೀತಿಯಲ್ಲಿ ಆಡಳಿತವನ್ನು ನೀಡಬೇಕು. ಕಾನೂನು, ಸಂವಿಧಾನಕ್ಕೆ ಬದ್ಧವಾಗಿ ಆಡಳಿತವಿದ್ದಾಗ ಮಾತ್ರವೇ ಮಾನವ ಹಕ್ಕುಗಳಿಗೆ ರಕ್ಷಣೆ ನೀಡಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ಯಾವುದೇ ರೀತಿಯಲ್ಲಿ ತಾರತಮ್ಯವಿಲ್ಲದೆ ಪ್ರತಿಯೊಬ್ಬ ಪ್ರಜೆಯ ಹಕ್ಕುಗಳನ್ನು ರಕ್ಷಿಸುವ ಆಡಳಿತವನ್ನು ಒದಗಿಸುವುದು ಪರವು ಕರ್ತವ್ಯ ಎಂದವರು ಹೇಳಿದರು.

ಮನೆಯಿಂದಲೇ ಹೆಣ್ಣು- ಗಂಡಿನ ನಡುವೆ ತಾರತಮ್ಯದೊಂದಿಗೆ ಮಾನವ ಹಕ್ಕುಗಳ ಉಲ್ಲಂಘನೆ ಆರಂಭವಾಗುತ್ತದೆ. ಈ ಉಲ್ಲಂಘನೆ ಸಾಮಾಜಿಕ, ಆರ್ಥಿಕ ಹಾಗೂ ನ್ಯಾಯಾಂಗ ವ್ಯವಸ್ಥೆಯವರೆಗೂ ಮುಂದುವರಿದಿದೆ. ನಮ್ಮ ಹಕ್ಕುಗಳನ್ನು ಮೊಟಕುಗೊಳಿಸುವ ಅಥವಾ ಇತರರ ಹಕ್ಕುಗಳನ್ನು ನಿರ್ಬಂಧಿಸುವ ಅಧಿಕಾರ ಯಾರೊಬ್ಬರಿಗೂ ಇಲ್ಲ. ಇತರರ ಮಾನವ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಾಗಾದಾಗ ಅದು ನಾಗರಿಕತೆುೀ ಅಲ್ಲ ಎಂದವರು ಪ್ರತಿಪಾದಿಸಿದರು.

ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಜತೆಗೆ ಇತರರ ಹಕ್ಕುಗಳಿಗೂ ಹೋರಾಟ ಮಾಡಬೇಕು. ಮಾತ್ರವಲ್ಲದೆ, ಇತರ ಹಕ್ಕುಗಳನ್ನು ಗೌರವಿಸಬೇಕು ಎಂದು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ಭಗಿನಿ ಡಾ. ಜೆಸ್ವಿನಾ ಎಸಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಸಂಚಾಲಕ ಹಾಗೂ ಕಾಲೇಜಿನ ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥ ಚಂದ್ರಮೋಹನ ಮರಾಠೆ ಸ್ವಾಗತಿಸಿದರು. ಸಹ ಸಂಚಾಲಕಿ ಗಾಯತ್ರಿ ಬಿ.ಕೆ. ಉಪಸ್ಥಿತರಿದ್ದರು.

ಪುಲ್ವಾಮದಲ್ಲಿ ಯೋಧರ ಹಕ್ಕುಗಳ ಉಲ್ಲಂಘನೆ

ಪುಲ್ವಾಮದಲ್ಲಿ ಯೋಧರ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸುವ ಮೂಲಕ ಅವರ ಹಕ್ಕುಗಳನು ಉಲ್ಲಂಘಿಸಿದ್ದಾರೆ. ಈ ಘಟನೆ ಹೀನ ಮತ್ತು ಹೇಯ ಕೃತ್ಯ. ದೇಶದ ರಕ್ಷಣೆ ಮಾಡುವವರನ್ನೇ ಉಗ್ರರು ಕೊಂದು ಆತಂಕವನ್ನು ಸೃಷ್ಟಿಸಿದ್ದಾರೆ.

ನ್ಯಾ. ಡಿ.ಎಚ್. ವಾೇಲ, ಅಧ್ಯಕ್ಷರು, ಮಾನವ ಹಕ್ಕುಗಳ ಆಯೋಗ, ಕರ್ನಾಟಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News