ರಾಜ್ಯಮಟ್ಟದ ಪಾರಂಪರಿಕ ಕಾವಿ ಚಿತ್ತಾರ ಕಾರ್ಯಾಗಾರ ಸಮಾರೋಪ

Update: 2019-02-18 13:42 GMT

ಕುಂದಾಪುರ, ಫೆ.18: ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಕುಂದಾಪುರ ಮೂಡಲಕಟ್ಟೆಯ ದೊಡ್ಡಮನೆಯಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿ ಕೊಳ್ಳಲಾದ ರಾಜ್ಯಮಟ್ಟದ ಪಾರಂಪರಿಕ ಕಾವಿ ಚಿತ್ತಾರ ಕಾರ್ಯಾಗಾರದ ಸಮಾ ರೋಪ ಸಮಾರಂಭವು ಇತ್ತೀಚೆಗೆ ನಡೆಯಿತು.

ಬಾರ್ಕೂರು ಮಹಾಸಂಸ್ಥಾನಂನ ಪೀಠಾಧಿಪತಿ ಡಾ.ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಕರಾವಳಿ ತುಳುನಾಡಿನ ವೈಭವವನ್ನು ಕಲೆಯ ಮೂಲಕ ಇಡೀ ರಾಜ್ಯಕ್ಕೆ ಪರಿಚಯಿಸುವ ಅಕಾಡೆಮಿಯ ಪ್ರಯತ್ನ ಪ್ರಶಂಸ ನೀಯ. ಸಂಸ್ಥಾನದಲ್ಲಿಯೂ ಕಾವಿ ಚಿತ್ರದ ಮೂಲಕ ಭೂತಾಳ ಪಾಂಡ್ಯ ವೈಭವವನ್ನು ಸಾರುವ ಚಿತ್ರ ರಚನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕೆಆರ್‌ಐಡಿಎಲ್ ಉಡುಪಿ ಕಾರ್ಯಪಾಲಕ ಅಭಿಯಂತರ ಕೃಷ್ಣ ಹೆಬ್ಸೂರು, ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸತೀಶ್ ಪೂಜಾರಿ, ಜಾನಪದ ವಿದ್ವಾಂಸ ಡಾ.ಕನರಾಡಿ ವಾದಿರಾಜ ಭಟ್, ಅಕಾಡೆಮಿ ರಿಜಿಸ್ಟ್ರಾರ್ ಡಾ.ಎ.ಸಿ.ಶೈಲಜಾ, ದೊಡ್ಮನೆಯ ಮುಖ್ಯಸ್ಥ ಡಾ.ಜಿ.ಪಿ.ಶೆಟ್ಟಿ, ಜಾನಪದ ತಜ್ಞ ಎಸ್.ಎ.ಕೃಷ್ಣಯ್ಯ ಮುಖ್ಯ ಅತಿಥಿಗಳಾಗಿದ್ದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಸಹಾಯಕ ನಿದೇಶಕ ಆರ್.ಚಂದ್ರಶೇಕರ್ ವಹಿಸಿದ್ದರು. ಜಿಲ್ಲೆಯ ಹಿರಿಯ ಕಲಾವಿದ ಕೆ.ಎಲ್.ಭಟ್ ಅವರನ್ನು ಸನ್ಮಾನಿಸಲಾಯಿತು. ಭಾಗವಹಿಸಿದ ಕಲಾವಿದರುಗಳಿಗೆ ಅಕಾಡೆಮಿಯ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಅಕಾಡೆಮಿ ಸದಸ್ಯರಾದ ಮಂಡ್ಯದ ಅಭಿಲಾಶ್, ಬಳ್ಳಾರಿಯ ವಿಕ್ರಮ್ ನಿಹಾಲ್ ರಾಜು ಉಪಸ್ಥಿತರಿದ್ದರು, ಸದಸ್ಯ ಸಂಚಾಲಕ ರಾಘವೇಂದ್ರ ಕೆ.ಅಮೀನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವೇಂದ್ರ ಹುಡಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 20 ಕಲಾವಿದರು ಗೀರು ಚಿತ್ರದ ಮೂಲಕ ಸಾಂಪ್ರದಾಯಿಕ ಕಾವಿ ಚಿತ್ರ ರಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News