ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಆಹ್ವಾನ

Update: 2019-02-18 13:50 GMT

ಉಡುಪಿ, ಫೆ.18: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2018-19ನೇ ಸಾಲಿನಿಂದ ಅನುಷ್ಠಾನಗೊಳಿಸಲಾ ಗುತ್ತಿದ್ದು, 2 ಹೆಕ್ಟೇರ್‌ಗಿಂತ ಕಡಿಮೆ ಭೂ ಹಿಡುವಳಿ ಹೊಂದಿರುವ ಸಣ್ಣ, ಅತಿ ಸಣ್ಣ ರೈತ ಕುಟುಂಬಕ್ಕೆ ಒಂದು ವರ್ಷಕ್ಕೆ 6,000ರೂ.ವನ್ನು ನಾಲ್ಕು ತಿಂಗಳಿ ಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ.

ಫಲಾನುಭವಿಗಳ ಆಯ್ಕೆ: ಸರಕಾರದ ವಿವಿಧ ಯೋಜನೆಗಳಡಿ ಲಭ್ಯವಿರುವ ಪಟ್ಟಿ/ ಕಂದಾಯ ಇಲಾಖೆಯಿಂದ ಗುರುತಿಸಿರುವ 2 ಹೆಕ್ಟೇರ್‌ಗಿಂತ ಕಡಿಮೆ ಭೂ ಹಿಡುವಳಿ ಇರುವ ರೈತರ ಪಟ್ಟಿಯನ್ನು ಗ್ರಾಮವಾರು ವರ್ಗೀಕರಿಸಿ, ಸಂಭವನೀಯ ಅರ್ಹ ರೈತರ ಪಟ್ಟಿ ತಯಾರಿಸಲಾಗುವುದು. ಈ ಪಟ್ಟಿಯನ್ನು ಸಂಬಂಧಪಟ್ಟ ಗ್ರಾಪಂಗಳಲ್ಲಿ ಮಾಹಿತಿಗಾಗಿ ಪ್ರಕಟಿಸಲಾಗುವುದು.

ಯೋಜನೆಯ ಮಾರ್ಗಸೂಚಿಯಂತೆ ಸವಲತ್ತು ಪಡೆಯಲು ರೈತರು ಅರ್ಹ ರಾಗಿದ್ದಲ್ಲಿ, ಕಡ್ಡಾಯವಾಗಿ ಸ್ವಯಂ ಘೋಷಣೆಯನ್ನು ನಮೂನೆ-ಸಿಯಲ್ಲಿ ಆಧಾರ್ ಮಾಹಿತಿ ಬಳಕೆಗೆ ಒಪ್ಪಿಗೆ ಪತ್ರದೊಂದಿಗೆ ಸಲ್ಲಿಸಬೇಕಾಗುತ್ತದೆ. ಈ ರೀತಿ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವ ರೈತರ ಪಟ್ಟಿಯನ್ನು ಅಂತಿಮ ಗೊಳಿಸಿ, ಯೋಜನೆಯಡಿ ಸಲವತ್ತು ಪಡೆಯಲು ಪರಿಗಣಿಸಲಾಗುವುದು. ಸಂಭವನೀಯ ಪಟ್ಟಿಯಲ್ಲಿರದ ಅರ್ಹ ರೈತರು ನಮೂನೆ-ಡಿಯಲ್ಲಿ ಸ್ವಯಂ ಘೋಷಣೆಯನ್ನು ನೀಡಿ ಯೋಜನೆಯ ಸವಲತ್ತು ಪಡೆಯಬಹುದು. ಸಂಭವನೀಯ ಪಟ್ಟಿಯಲ್ಲಿರುವ ರೈತರು ಅನುಷ್ಠಾನ ಮಾರ್ಗಸೂಚಿಯ ಪ್ರಕಾರ ಅನರ್ಹರಾಗಿದ್ದಲ್ಲಿ ತಮ್ಮ ಹೆಸರನ್ನು ಕೈಬಿಡಲು ಅನುಬಂಧ-ಇ ಯನ್ವಯ ಸ್ವಯಂ ಘೋಷಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ: ರೈತರು ಅರ್ಜಿ ಸಲ್ಲಿಸಲು ಸರಕಾರಿ ಸ್ವಾಮ್ಯದ ಕೇಂದ್ರಗಳಾದ ಬಾಪೂಜಿ ಸೇವಾ ಕೇಂದ್ರ, ರೈತ ಸಂಪರ್ಕ ಕೇಂದ್ರ, ಅಟಲ್‌ಜಿ ಜನ ಸ್ನೇಹಿ ಕೇಂದ್ರ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ತಾಲೂಕು ಮಟ್ಟದ ಕಛೇರಿಗಳನ್ನು ಸಂಪರ್ಕಿಸಬಹುದು.

ಯೋಜನೆಯಡಿ ಸವಲತ್ತು ಪಡೆಯಲು 2 ಹೆಕ್ಟೇರ್ (5 ಎಕ್ರೆ)ಗಿಂತ ಕಡಿಮೆ ಭೂಹಿಡುವಳಿ ಹೊಂದಿರುವ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರು ಅರ್ಹರಿರುತ್ತಾರೆ. 2 ಹೆಕ್ಟೇರ್‌ಗಿಂತ ಹೆಚ್ಚಿನ ಕೃಷಿ ಜಮೀನು ಹೊಂದಿರುವ ರೈತ ಕುಟುಂಬ, ಭೂಮಿ ಹೊಂದಿರುವ ಸಂಘ ಸಂಸ್ಥೆಗಳು ಹಾಗೂ ಇತರ ಲಾಭದಾಯಕ ಹುದ್ದೆಯಲ್ಲಿರುವವರು ಯೋಜನೆಯ ಸವಲತ್ತು ಪಡೆಯಲು ಅರ್ಹತೆ ಹೊಂದಿರುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News