×
Ad

ಶಿರ್ವ: ಕಾಲೇಜು ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ

Update: 2019-02-18 19:21 IST

ಶಿರ್ವ, ಫೆ.18: ಸ್ಥಳೀಯ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ಕಾಲೇಜಿನ ಮತದಾರರ ಜಾಗೃತಿ ಕ್ಲಬ್ ಮತ್ತು ರಾಷ್ಟ್ರೀಯ ಯೋಜನಾ ಘಟಕದ ಆಶ್ರಯದಲ್ಲಿ ಬೃಹತ್ ಮತದಾರರ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಜಾಥಾದಲ್ಲಿ ಮತದಾನ ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಕಾಲೇಜಿನ ಕಚೇರಿ ಸಿಬ್ಬಂದಿಗಳು ಒಟ್ಟಾಗಿ ಶಿರ್ವ ಪೇಟೆಯಲ್ಲಿ ಬೃಹತ್ ಜಾಥಾವನ್ನು ನಡೆಸಿ ಮತದಾನದ ಮಹತ್ವವನ್ನು ಬಿತ್ತರಿಸಿದರು.

ಜಾಥಾದಲ್ಲಿ ವಿದ್ಯಾರ್ಥಿಗಳು ಹಿಡಿದಿದ್ದ ‘ಮತದಾನ ನಮ್ಮ ಹಕ್ಕು’ ಎಂಬ ಭಿತ್ತಿಪತ್ರಗಳು ಶಿರ್ವದ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News