ಮೀನುಗಾರರ ಸಮಸ್ಯೆ: ಉಪನಿರ್ದೇಶಕರು-ಮೀನುಗಾರರ ಸಂಘಟನೆಗಳ ಪ್ರಮುಖರ ಸಭೆ

Update: 2019-02-18 14:59 GMT

ಮಂಗಳೂರು, ಫೆ.18: ಮೀನುಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಮೀನುಗಾರಿಕಾ ಉಪನಿರ್ದೇಶಕರು ಸೋಮವಾರ ಮೀನುಗಾರಿಕಾ ಸಂಘಟನೆಗಳ ಪ್ರಮುಖರೊಂದಿಗೆ ಇಲಾಖಾ ಕಚೇರಿಯಲ್ಲಿ ಚರ್ಚೆ ನಡೆಸಿದ್ದಾರೆ.

ಬೋಟ್‌ಗಳಿಗೆ ಬಣ್ಣ ಬಲಿಯಬೇಕು ಎಂಬ ನಿರ್ದೇಶನವನ್ನು ಸರಕಾರ ನೀಡಿದ್ದು, ಅದನ್ನು ಪಾಲಿಸಬೇಕು ಎಂದು ಉಪನಿರ್ದೇಶಕರ ಚಿಕ್ಕವೀರ ನಾಯಕ್ ನೀಡಿದ ಸೂಚನೆಗೆ ಪ್ರತಿಕ್ರಿಯಿಸಿದ ಮುಖಂಡರು ಬೋಟ್‌ಗಳಿಗೆ ಬಲಿದ ಬಣ್ಣವು ನೀರಲ್ಲಿ ಕರಗಿ ಹೋಗಲಿದೆ. ಶಾಶ್ವತವಾಗಿ ಕರಗಿ ಹೋಗದ ಬಣ್ಣವನ್ನು ಒದಗಿಸಿದರೆ ಮೀನುಗಾರರು ಬಣ್ಣ ಬಲಿದು ಸಹಕಾರ ನೀಡಲಾಗುವುದು ಎಂದರು.

ಎಪ್ರಿಲ್‌ನಿಂದ ಸೀಮೆಎಣ್ಣೆಯನ್ನು ಪೂರ್ಣ ಹಣ ಪಾವತಿಸಿ ಖರೀದಿಸಬೇಕು. ಸಬ್ಸಿಡಿಯನ್ನು ಆಯಾ ಮೀನುಗಾರರ ಬ್ಯಾಂಕ್ ಖಾತೆಗೆ ನೇರವಾಗಿ ರವಾನೆಗೊಳಿಸುವ ವ್ಯವಸ್ಥೆಯನ್ನು ಇಲಾಖೆ ಮಾಡಲಿದೆ ಎಂದು ಉಪನಿರ್ದೇಶಕರ ಸೂಚನೆಗೆ ಅಸಮಾಧಾನ ವ್ಯಕ್ತಪಡಿಸಿದ ಮೀನುಗಾರರ ಸಂಘಟನೆಗಳ ಪ್ರಮುಖರು ಯಾವ ಕಾರಣಕ್ಕೂ ಸೀಮೆಎಣ್ಣೆಯನ್ನು ಪೂರ್ಣ ಹಣವನ್ನು ಪಾವತಿಸಿ ಪಡೆಯಲು ಸಾಧ್ಯವಿಲ್ಲ. ಈ ಹಿಂದಿನಂತೆ ಸಬ್ಸಿಡಿ ದರದಲ್ಲೇ ಸೀಮೆಎಣ್ಣೆ ಯನ್ನು ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಅಲಿ ಹಸನ್, ಸುಭಾಷ್ ಕಾಂಚನ್, ಹೈದರ್, ಇಸ್ಮಾಯೀಲ್ ಉಳ್ಳಾಲ, ನಾಡದೋಣಿ ಮೀನುಗಾರರ ಸಂಘದ ಮುಖಂಡರಾದ ಬಿ.ಕೆ.ವಾಸು, ಸುಭಾಷ್ ಬೋಳಾರ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News