ಫೆ. 25: ಕೈತೋಟ, ತಾರಸಿ ಕೃಷಿಗೆ ಉಚಿತ ಮಾಹಿತಿ ಶಿಬಿರ

Update: 2019-02-18 15:29 GMT

ಮಣಿಪಾಲ, ಫೆ. 18: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮತ್ತು ಸೆಲ್ಕೋ ಪೌಂಢೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೈತೋಟ ಮತ್ತು ತಾರಸಿ ತೋಟದ ಉಚಿತ ಮಾಹಿತಿ ಶಿಬಿರವನ್ನು ಫೆ.25ರ ಸೋಮವಾರ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ಆಯೋಜಿಸಲಾಗಿದೆ.

ಶಿಬಿರ ಬೆಳಗ್ಗೆ 9:30ರಿಂದ ಸಂಜೆ 4  ಗಂಟೆಯವರೆಗೆ ನಡೆಯಲಿದೆ. ಇದರಲ್ಲಿ ತೋಟಗಾರಿಕೆ ಇಲಾಖೆ, ಬ್ರಹ್ಮಾವರದ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಕೈ ತೋಟ ಮತ್ತು ತಾರಸಿ ಕೃಷಿಯ ಪ್ರಾಮುಖ್ಯತೆ, ಮಣ್ಣಿನ ಫಲವತ್ತತೆ ಕಾಯ್ದು ಕೊಳ್ಳುವ ವಿಧಾನ, ಸಾವಯವ ಗೊಬ್ಬರದ ತಯಾರಿ, ಬಡ್ಡಿಂಗ್, ಗ್ರಾಪ್ಟಿಂಗ್, ಲೆಯರಿಂಗ್, ಬೊನ್ಸಾಯಿ ಕೃಷಿ, ಹೈಡ್ರೋ ಫೋನಿಕ್ಸ್ ಮತ್ತು ಏರೋಫೋನಿಕ್ಸ್ ಇತ್ಯಾದಿಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಲಿದ್ದಾರೆ.

ತರಬೇತಿ ಸಂಪೂರ್ಣ ಉಚಿತವಾಗಿದೆ. ಆಸಕ್ತರು ಬಿವಿಟಿಗೆ ದೂರವಾಣಿ ಕರೆ ಮಾಡಿ (ನಂ: 0820-2570263) ತಮ್ಮ ಹೆಸರು ನೊಂದಾಯಿಸಿ ಕೊಳ್ಳಬಹುದು.

ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬಹುದು. ಭಾರತೀಯ ವಿಕಾಸ ಟ್ರಸ್ಟ್, ‘ಅನಂತ’, ಪೆರಂಪಳ್ಳಿ, ಮಣಿಪಾಲ- ಅಂಬಾಗಿಲು ರಸ್ತೆ, ಉಡುಪಿ- 576102

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News