ಪ್ರಚೋದನಕಾರಿ ಫ್ಲೆಕ್ಸ್ : ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲು

Update: 2019-02-18 18:16 GMT

ಮಂಗಳೂರು, ಫೆ.18: ಉಳ್ಳಾಲದ ಜನನಿಬಿಡ ಪ್ರದೇಶವಾದ ಉಳ್ಳಾಲ ಒಳಪೇಟೆಯಲ್ಲಿ ಹಿಂದುತ್ವವಾದಿ ಸಂಘಟನೆಯೊಂದು ಅಳವಡಿಸಿದ ಫ್ಲೆಕ್ಸ್‌ನ್ನು ಉಳ್ಳಾಲ ಪೊಲೀಸರು ರವಿವಾರ ರಾತ್ರಿ ತೆರವುಗೊಳಿಸಿದ್ದು, ಆರೋಪಿಗಳ ವಿರುದ್ಧ ಕೇಸು ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಅವರಿಗೆ ಮಾಹಿತಿ ಪಡೆಯಲು ‘ವಾರ್ತಾಭಾರತಿ’ ಸಂಪರ್ಕಿಸಿದಾಗ, ‘ಫ್ಲೆಕ್ಸ್ ಅಳವಡಿಸಿದ ವಿರುದ್ಧ ಕೇಸು ದಾಖಲಾಗಿದೆ’ ಎಂದಷ್ಟೇ ಉತ್ತರಿಸಿದ್ದು, ಉಳಿದಂತೆ ಇನ್ನಾವುದೇ ಮಾಹಿತಿ ನೀಡಲು ಸಂಪೂರ್ಣ ನಿರಾಕರಿಸುವ ಮೂಲಕ ಕರೆಯನ್ನು ಕಡಿತಗೊಳಿಸಿದ್ದಾರೆ.

ಮತ್ತೊಮ್ಮೆ ಇನ್‌ಸ್ಪೆಕ್ಟರ್‌ನ್ನು ಸಂಪರ್ಕಿಸಿದಾಗ, ಫೋನ್ ಎರಡು ಬಾರಿ ರಿಂಗಣಿಸಿದ ಬಳಿಕ ಕರೆಯನ್ನು ಕಡಿತಗೊಳಿಸಿ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಉನ್ನುಳಿದಂತೆ ‘ಕೇಸು ಠಾಣೆಯಲ್ಲಿ ದಾಖಲಾಗಿದೆಯೇ’ ಎನ್ನುವ ಬಗ್ಗೆ ಉಳ್ಳಾಲ ಠಾಣೆಯ ಎಸ್ಸೈ ಹಾಗೂ ಠಾಣೆಗೆ ಸಂಪರ್ಕಿಸಿದಾಗ ‘ಫ್ಲೆಕ್ಸ್ ಅಳವಡಿಕೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಯಾವುದೇ ಕೇಸು ದಾಖಲಾಗಿಲ್ಲ’ ಎಂದು ಹೇಳುವ ಮೂಲಕ ಉಳ್ಳಾಲ ಪೊಲೀಸರು ದ್ವಂದ್ವ ರೀತಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News