ಮಾಲ್ದೀವ್ಸ್ ಮಾಜಿ ಅಧ್ಯಕ್ಷರ ಬಂಧನಕ್ಕೆ ಆದೇಶ

Update: 2019-02-18 16:58 GMT

ಮಾಲೆ (ಮಾಲ್ದೀವ್ಸ್), ಫೆ. 18: ಕಪ್ಪು ಹಣ ಬಿಳುಪು ಆರೋಪದಲ್ಲಿ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್‌ರನ್ನು ಬಂಧಿಸುವಂತೆ ಮಾಲ್ದೀವ್ಸ್ ಅಧಿಕಾರಿಗಳು ಸೋಮವಾರ ಆದೇಶ ನೀಡಿದ್ದಾರೆ.

ಸೆಪ್ಟಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸೋಲುವ ಕೆಲವೇ ದಿನಗಳ ಮೊದಲು ಅವರು ಸುಮಾರು 1.5 ಮಿಲಿಯ ಡಾಲರ್ (ಸುಮಾರು 10.7 ಕೋಟಿ ರೂಪಾಯಿ) ಹಣವನ್ನು ಅಕ್ರಮವಾಗಿ ಪಡೆದಿದ್ದಾರೆ ಎಂಬ ಆರೋಪಗಳ ಬಗ್ಗೆ ನ್ಯಾಯಾಲಯವೊಂದು ಪ್ರಾಥಮಿಕ ತನಿಖೆ ಆರಂಭಿಸಿದ ಬಳಿಕ ಈ ಬಂಧನಾದೇಶ ಹೊರಡಿಸಲಾಗಿದೆ.

‘‘ಯಮೀನ್ ಸಾಕ್ಷಿಗಳಿಗೆ ಲಂಚ ನೀಡಲು ಪ್ರಯತ್ನಿಸಿದ್ದಾರೆ ಎಂಬುದಾಗಿ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ’’ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News