ನಾವುಂದ: ಎಸ್ಸೆಸ್ಸೆಫ್ ಸಂಘಟನಾ ನಾಯಕರಿಗೆ ಸನ್ಮಾನ

Update: 2019-02-18 17:15 GMT

ಬೈಂದೂರು, ಫೆ.18: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಕೋಯನಗರ ಶಾಖೆಯ ವತಿಯಿಂದ ಮಾಸಿಕ ಮಹ್’ಳರತುಲ್ ಬದ್ರಿಯಾಃ ಮಜ್ಲಿಸ್ ಹಾಗೂ ಎಸ್ಸೆಸ್ಸೆಫ್ ಸಂಘಟನಾ ನಾಯಕರಿಗೆ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆ ಕೋಯನಗರ ಬುಸ್ತಾನುಲ್ ಉಲೂಂ ಮದ್ರಸದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಬೈಂದೂರು ಡಿವಿಷನ್ ಅಧ್ಯಕ್ಷ ಎಸ್.ಎಂ. ಹನೀಫ್ ಸಅದಿ ನಾವುಂದ ಉದ್ಘಾಟಿಸಿದರು ಶಾಖಾ ಉಪಾಧ್ಯಕ್ಷ ನೌಶಾದ್ ಎನ್.ಸಿ. ಅಧ್ಯಕ್ಷತೆ ವಹಿಸಿದ್ದರು. ಆಕಳಬೈಲು ಜುಮಾ ಮಸೀದಿಯ ಖತೀಬ್ ಹಾಜಿ ಇಸ್ಮಾಯಿಲ್ ಮುಸ್ಲಿಯಾರ್ ದುವಾ ನೆರವೇರಿಸಿದರು.

ಸ್ಥಳೀಯ ಇಮಾಮ್ ಕೊಂಬಾಳಿ ಕೆ.ಎಂ.ಎಚ್.ಝುಹುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ನಾಯಕರಾದ ಕೊಂಬಾಳಿ ಕೆ.ಎಂ.ಎಚ್. ಝುಹುರಿ, ಎಸ್.ಎಂ. ಹನೀಫ್ ಸಅದಿ, ತಾಜುದ್ದೀನ್ ಸಖಾಫಿ ಕೋಯ ನಗರ, ಬದ್ರುದ್ದೀನ್ ಝುಹುರಿ ನಾವುಂದ, ಅಬ್ದುಸ್ಸತ್ತಾರ್ ಕೋಯನಗರ, ಮುಹಮ್ಮದಲಿ ಹಾಜಿ, ಕೆ.ಎಂ.ಇಮ್ತಿಯಾಝ್, ಮುಜ್ತಬ ಕೋಯನಗರ, ಮುಸ್ತಫಾ ಕೋಯನಗರ ಅವರನ್ನು ಸನ್ಮಾನಿಸಲಾಯಿತು.

ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಫ್ ಸದಸ್ಯತನ ಪಡೆದ ಕಾರ್ಯಕರ್ತರಿಗೆ ನೂತನ ಐಡಿ ಕಾರ್ಡ್‌ಗಳನ್ನು ವಿತರಿಸಲಾಯಿತು. ಕೋಯನಗರ ಮೊಹಲ್ಲಾ ಅಧ್ಯಕ್ಷ ಇರ್ಷಾದ್., ಮದ್ರಸ ಅಧ್ಯಾಪಕ ಮುನೀರ್ ಸಖಾಫಿ ಸುಳ್ಯ, ಪ್ರಮುಖರಾದ ಕೆ.ಸಿ.ಹಸೈನಾರ್ ಮುಸ್ಲಿಯಾರ್ ಬೈಂದೂರು ಮೊದಲಾದವರು ಉಪಸ್ಥಿತರಿ ದ್ದರು.

ಶಾಖಾ ಪ್ರಧಾನ ಕಾರ್ಯದರ್ಶಿ ಮುಝ್ಝಮ್ಮಿಲ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News