ಹೂಡೆ: ಶಾಲಾ ಪೋಷಕರಿಗೆ ಏಕದಿನದ ತರಬೇತಿ

Update: 2019-02-18 17:16 GMT

ಉಡುಪಿ, ಫೆ.18: ಪಡುತೋನ್ಸೆ ಹೂಡೆಯ ಸಾಲಿಹಾತ್ ಶಾಲೆಯ ಪೋಷಕರಿಗೆ ಏಕದಿನದ ತರಬೇತಿ ಇತ್ತೀಚೆಗೆ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಅನುಪಮ ಮಾಸಿಕದ ಉಪ ಸಂಪಾದಕಿ ಸಬೀಹಾ ಫಾತಿಮಾ ಮಂಗಳೂರು ಮಾತನಾಡಿ, ಮಕ್ಕಳ ತರಬೇತಿ ಮನೆಯಿಂದ ಆರಂಭಗೊಳ್ಳುತ್ತದೆ. ಕುಟುಂಬದಲ್ಲಿನ ಅನುಸರಣೆಯನ್ನೇ ಮಕ್ಕಳು ಮುಂದು ವರಿಸುತ್ತಾರೆ. ಹಾಗಾಗಿ ಉತ್ತಮ ಸುಸಂಸ್ಕೃತಿ ಕುಟುಂಬವಿದ್ದಲ್ಲಿ ಮಕ್ಕಳು ಕೂಡ ಸುಸಂಸ್ಕೃತರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಪೋಷಕರು ಮೊದಲಾಗಿ ತಮ್ಮ ನಡವಳಿಕೆ ಉತ್ತಮ ಪಡಿಸಿಕೊಳ್ಳಬೇಕು ಎಂದರು.

ಮಕ್ಕಳನ್ನು ಕೇವಲ ಅಂಕಗಳಿಕೆಗೆ ಸೀಮಿತಗೊಳಿಸದೇ, ಉತ್ತಮ ಗುಣನಡತೆ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಪೋಷಕರು ತರಬೇತಿ ನೀಡಬೇಕು ಎಂದು ಅವರು ಕರೆ ನೀಡಿದರು.

ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕಿಯರಾದ ಸುನಂದಾ, ಲವೀನಾ ಕ್ಲಾರಾ ಉಪಸ್ಥಿತರಿ ದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News