ಮಹಿಳೆಯರಿಂದ ಗ್ರಾಮದ ಅಭಿವೃದ್ಧಿ ಸಾಧ್ಯ: ಸೊರಕೆ

Update: 2019-02-18 17:18 GMT

 ಉಡುಪಿ, ಫೆ.18: ಗ್ರಾಮ ಅಭಿವೃದ್ಧಿಯಾಗಬೇಕಾದರೆ ಮಹಿಳೆಯರ ಪಾತ್ರ ಅತೀ ಮುಖ್ಯವಾಗಿದೆ. ಮಹಿಳೆಯರು ಒಗ್ಗಟ್ಟಿನಲ್ಲಿ ತಮ್ಮ ಊರಿನ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಿದರೆ ಯಾವುದೇ ಸಮಸ್ಯೆಗಳಿಲ್ಲದೆ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

 ಮಾರ್ಪಳ್ಳಿಯಲ್ಲಿ ಮಹಿಳಾ ಮಂಡಳಿಯ ನೂತನ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಮಹಿಳೆ ಹುಟ್ಟಿನಿಂದಲೇ ಹಲವಾರು ಕಷ್ಟಗಳನ್ನು ಎದುರಿಸಿ ಸಮಾಜದಲ್ಲಿ ಬದುಕುತ್ತಾಳೆ. ಅವಳನ್ನು ಸಮಾಜವು ಅತೀ ಗೌರವದಿಂದ ನಡೆಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಉದಯ ಕುಮಾರ್ ಮಾರ್ಪಳ್ಳಿ, ಸಂಘದ ಅಧ್ಯಕ್ಷ ಪಾಂಡುರಂಗ ನಾಯ್ಕ, ಮಹಿಳಾ ಮಂಡಳಿಯ ಅಧ್ಯಕ್ಷೆ ಪ್ರಮೀಳಾ ಶೆಟ್ಟಿಗಾರ್, ಗೌರವಾಧ್ಯಕ್ಷ ಕುಂಞುಮೋನ್, ಅನುರಾಧ ಶೆಟ್ಟಿಗಾರ್, ಕಾರ್ಯ ದರ್ಶಿ ಹರಿಶ್ಚಂದ್ರ ಅಮೀನ್, ಉಪಾಧ್ಯಕ್ಷ ವಿಶ್ವಜಿತ್ ಸಾಲ್ಯಾನ್, ಕೋಶಾಧಿಕಾರಿ ರಾಜೀವ್ ನಾಯ್ಕ್, ಹಿರಿಯ ಸದಸ್ಯ ನಾರಾಯಣ ನಾಯ್ಕ್, ವಸಂತ ಶೆಟ್ಟಿ ಗಾರ್, ವಿಶ್ವನಾಥ್ ಅಮೀನ್, ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News