ಉಡುಪಿ: ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Update: 2019-02-18 17:20 GMT

ಉಡುಪಿ, ಫೆ.18: ಜಮೀಯ್ಯತುಲ್ ಫಲಾಹ್ ಉಡುಪಿ ಘಟಕ, ಉಡುಪಿ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಸಹಯೋಗದೊಂದಿಗೆ ಪುತ್ತೂರು ಗ್ರಾಮದ ಹನುಮಂತ ನಗರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಗಳಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಇತ್ತೀಚೆಗೆ ಜರಗಿತು.

ಸಂಸ್ಥೆಯ ಉಡುಪಿ ಘಟಕದ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರಕಾರಿ ಪ್ರೌಢಶಾಲೆಯ ಮುಖ್ಯೋ ಪಾಧ್ಯಾಯ ಮುಸಾರತ್ ಜಹಾನ್ ಅಕ್ಬರ್ ಎಂ., ನೇತ್ರ ತಜ್ಞೆ ಡಾ.ರೂಪಶ್ರೀ, ಡಾ.ಸುಮನ ಶೆಟ್ಟಿ, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಹಿ ರತ್ನಾಕರ್, ಲೊಂಬಾರ್ಡ್ ಇಂಟರ್ಯಾಕ್ಟ್ ಕ್ಲಬ್‌ನ ಅಧ್ಯಕ್ಷೆ ದೀಕ್ಷಾ ಉಪಸ್ಥಿತರಿ ದ್ದರು.

ಕೋಶಾಧಿಕಾರಿ ಸಮೀರ್ ಎಂ. ವಂದಿಸಿದರು. ಕಾರ್ಯದರ್ಶಿ ಕಾಸಿಮ್ ಬಾರಕೂರು ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಮುಶೀರ್ ಶೇಕ್, ಸಂಘಟನಾ ಕಾರ್ಯದರ್ಶಿ ನಾಸೀರ್ ಯಾಕುಬ್, ಸದಸ್ಯರುಗಳಾದ ಮುಹಮ್ಮದ್ ಹುಸೇನ್, ಅನ್ವರ್ ಸಹಕರಿಸಿದರು.

ಕೋಶಾಧಿಕಾರಿ ಸಮೀರ್ ಎಂ. ವಂದಿಸಿದರು. ಕಾರ್ಯದರ್ಶಿ ಕಾಸಿಮ್ ಬಾರಕೂರು ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಮುಶೀರ್ ಶೇಕ್, ಸಂಘಟನಾ ಕಾರ್ಯದರ್ಶಿ ನಾಸೀರ್ ಯಾಕುಬ್, ಸದಸ್ಯರುಗಳಾದ ಮುಹಮ್ಮದ್ ಹುಸೇನ್, ಅನ್ವರ್ ಸಹಕರಿಸಿದರು. 109 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದು ಕೊಂಡರು. ಮಕ್ಕಳಿಗೆ ಉಚಿತ ಔಷಧಿಯನ್ನು ವಿತರಿಸಲಾಯಿತು. ಕಣ್ಣಿನ ತೊಂದರೆ ಇರುವವರಿಗೆ ಮುಂದಿನ ವ್ಯವಸ್ಥೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News