ನಮ್ಮ ಬದುಕಿನ ಸಂಭ್ರಮದ ಕ್ಷಣಗಳು ನಮ್ಮ ಮನೋಸ್ಥಿತಿಯನ್ನು ಅವಲಂಭಿಸಿಕೊಂಡಿದೆ: ಶ್ರೀ ಸುಖಬೋದಾನಂದಜೀ

Update: 2019-02-18 17:31 GMT

ಮಂಗಳೂರು, ಫೆ.18: ನಮ್ಮ ಬದುಕಿನ ಸಂಭ್ರಮದ ಕ್ಷಣಗಳು ನಮ್ಮ ಮನೋಸ್ಥಿತಿಯನ್ನು ಅವಲಂಭಿಸಿಕೊಂಡಿದೆ ಎಂದು ಬೆಂಗಳೂರಿನ ಪ್ರಸನ್ನ ಟ್ರಸ್ಟ್ ಸ್ಥಾಪಕ ಕಾರ್ಪೊರೇಟ್ ಗುರು ಪೂಜ್ಯ ಶ್ರೀ ಸುಖಬೋದಾನಂದಜೀ ತಿಳಿಸಿದ್ದಾರೆ.

ಕರ್ಣಾಟಕ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಕಂಕನಾಡಿ ಮಹಾವೀರ ವೃತ್ತದ ಕರ್ಣಾಟಕ ಬ್ಯಾಂಕ್ ಆಡಿಟೋರಿಯಂ ಹಮ್ಮಿಕೊಂಡ ಬದುಕಿನಲ್ಲಿ ಸಂಭ್ರಮಾಚರಣೆ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಿದ್ದರು.

ನಾವು ಒತ್ತಡದಲ್ಲಿವೆ, ನಮ್ಮ ಬದುಕು ಸಮಸ್ಯೆಯಿಂದ ಕೂಡಿದೆ ಎಂದು ನಾವು ಕೊರಗುತ್ತಾ ಇರಲು ನಮ್ಮ ಮನೋಸ್ಥಿತಿ ಕಾರಣ ಅದನ್ನು ಬದಲಾಯಿಸಿ ಕೊಂಡಾಗ ಬದುಕನ್ನು ಸಂಭ್ರಮಿಸಬಹುದು. ಸಮಸ್ಯೆಗಳು ಎದುರಾದಾಗ ಆ ಸಮಸ್ಯೆಗಳ ನಡುವೆ ಸಂತೋಷವನ್ನು ಕಂಡುಕೊಳ್ಳಬೇಕು. ಸಮಸ್ಯೆಗಳು ಸೃಷ್ಟಿಯಾದ ದಾರಿಯಲ್ಲಿಯೇ ಅದಕ್ಕೊಂದು ಪರಿಹಾರವೂ ಇದೆ ಎನ್ನುವುದು ಸಾಕಷ್ಟು ಜನಕ್ಕೆ ತಿಳಿಯದೆ ಸಮಸ್ಯೆಯನ್ನು ಬಗೆಹರಿಸಲು ಒತ್ತಾಡುತ್ತಾರೆ. ಇದರಿಂದ ಹೊರಬರಬೇಕಾದರೆ ಮೊದಲು ನಾವು ರಾಗ ದ್ವೇಷಗಳಿಂದ ಆವರಿಸಿಕೊಂಡಿರುವ ಬದುಕಿನಲ್ಲಿ ಪ್ರೀತಿ ಮತ್ತು ಭಕ್ತಿಯಿಂದ ಕೂಡಿದ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಆಗ ಬದುಕಿನಲ್ಲಿ ಹೆಚ್ಚು ಸಮಭ್ರಮ ಪಡಬಹುದು ಎಂದು ಸುಖಬೋದಾನಂದಜೀ ತಿಳಿಸಿದ್ದಾರೆ.

ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್ ಸ್ವಾಗತಿಸಿ ಮಾತನಾಡುತ್ತಾ, ಕರ್ಣಾಟಕ ಬ್ಯಾಂಕ್‌ನ ಸಂಸ್ಥಾಪಕರನ್ನು ಸ್ಮರಿಸಿ ಬ್ಯಾಂಕಿನ ಏಳಿಗೆಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕೇವಲ 11,580 ರೂ. ಬಂಡವಾದೊಂದಿಗೆ ಆರಂಭವಾದ ಬ್ಯಾಂಕ್ ಪ್ರಸಕ್ತ 1,17,102 ಕೋಟಿ ಆರ್ಥಿಕ ವಹಿವಾಟು ನಡೆಸುವ ಖಾಸಗಿ ರಂಗದ ಅಗ್ರ ಬ್ಯಾಂಕ್ ಆಗಿ ಬೆಳೆದಿದೆ. 65,141 ಕೋಟಿ ಬಂಡವಾಳ ಹೊಂದಿರುವ ಬ್ಯಾಂಕ್, 51,961 ಕೋಟಿ ರೂ. ಸಾಲ ನೀಡಿದೆ. ಸಿಎಸ್‌ಆರ್ ನೀದಿಯಿಂದ 29.8 ಕೋಟಿ ರೂ ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಪರಿಸರ ಸಂರಕ್ಷಣೆ, ಮಹಿಳಾ ಸಶಕ್ತತೆ, ಸ್ವಚ್ಛ ಭಾರತ ಅಭಿಯಾನಕ್ಕೆ, ನಚಿಬೆರವು ಶಾಲೆಗಳಿಗೆ ಶೌಚಾಲಯ ನಿರ್ಮಾಣ ಸೇರಿದಂತೆ ಸಮುದಾಯದ ಎಲ್ಲಾ ಜನರಿಗೆ ಸಹಾಯವಾಗುವ ಸೇವಾ ಚಟುವಟಿಕೆಗಳಿಗೆ ನೆರವು ನೀಡುತ್ತಾ ಬಂದಿದೆ. ಭಾರತದ 22 ರಾಜ್ಯ ಎರಡು ಕೇಂದ್ರಾಡಳಿತ ಪ್ರದೇಶ ಸೇರಿದಂತೆ, ದೇಶದ ವಿವಿಧ ಕಡೆಗಳಲ್ಲಿ 829 ಬ್ಯಾಂಕ್ ಶಾಖೆಗಳನ್ನು1264 ಎಟಿಎಂಗಳನ್ನು ಹೊಂದಿರುವ ಕರ್ಣಾಟಕ ಬ್ಯಾಂಕ್ ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ 415.51 ಕೋಟಿ ರೂ ನಿವ್ವಳ ಲಾಭಗಳಿಸಿ, ಶೇ 30 ಡಿವಿಡೆಂಡ್ ನೀಡಿದೆ. 8,200 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ, 1,89,000 ಶೇರು ದಾರರನ್ನು ಸುಮಾರು ಒಂದು ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿರುವ ಸಂಸ್ಥೆಯಾಗಿ ಬೆಳೆಯಲು ಸಂಸ್ಥಾಪಕರ ಮುಂದಾಲೋಚನೆ ಹಿರಿಯರ ಮಾರ್ಗದರ್ಶನ ಹಾಗೂ ಹಿಂದಿನ ಅಧ್ಯಕ್ಷರು ಆಡಳಿತ ಮಂಡಳಿ ಶೇರುದಾರರು ಮತ್ತು ಗ್ರಾಹಕರ ಸಹಕಾರದಿಂದ ಸಾಧ್ಯವ ಆಗಿದೆ ಎಂದರು.

ಸಮಾರಂಭದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು, ಇಂಪ್ಯಾಕ್ಟ್ ಬೆಂಗಳೂರು, (ಅಂಧರ ಸಹಾಯ ಸಂಸ್ಥೆ )ಹೆಲ್ಫ್ ಬ್ಲೈಂಡ್ ಫೌಂಡೇಶನ್ ಚೆನ್ನೈ ಸೇರಿದಂತೆ ಮೂರು ಸಂಸ್ಥೆಗಳಿಗೆ ಆರ್ಥಿಕ ಸಹಾಯ ನೀಡುವ ಪ್ರಮಾಣ ಪತ್ರವನ್ನು ಅತಿಥಿಗಳ ಮೂಲಕ ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮ ಭಟ್ ವಹಿಸಿದ್ದರು. ಚೀಫ್‌ ಆಪರೇಟಿಂಗ್ ಆಫೀಸರ್ ರಾಘವೇಂದ್ರ ಭಟ್ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿಧುಷಿ ಶಾಂತಲಾ ಸುಬ್ರಹ್ಮಣ್ಯಂ, ವಿದುಷಿ ಅಕ್ಕರೈ ಸುವರ್ಣ ಲತಾ, ವಿದುಷಿ ಯು. ನಾಗಮಣಿ ಅವರಿಂದ ಸಂಗೀತಾ ಕಚೇರಿ ನಡೆಯಿತು. ಜೆನ್ನಿಫರ್ ಮೋರಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News