ಮನೆಗಳವು ಪ್ರಕರಣ: ನಗ-ನಗದು ಸಹಿತ ಆರೋಪಿ ವಶಕ್ಕೆ

Update: 2019-02-18 17:37 GMT

ಮಂಗಳೂರು, ಫೆ.18: ಬೆಂಗರೆ ಗ್ರಾಮದ ಸ್ಯಾಂಡ್ಸ್ ಫಿಟ್ ಬೆಂಗರೆ ಎಂಬಲ್ಲಿನ ಮನೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪಣಂಬೂರು ಪೊಲೀಸರು ವಶಕ್ಕೆ ಪಡೆದಿದ್ದು, ನಗ-ನಗದು ಸ್ವಾಧೀನಪಡಿಸಿಕೊಳ್ಳಲಾಗಿದೆ.

ತೋಟಬೆಂಗರೆ ನಿವಾಸಿ ದೀಕ್ಷಿತ್ ನಾಯಕ್ (20) ಬಂಧಿತ ಆರೋಪಿ.

ಬೆಂಗರೆ ಗ್ರಾಮದ ಸ್ಯಾಂಡ್ಸ್ ಫಿಟ್ ಬೆಂಗರೆ ಎಂಬಲ್ಲಿ ಫೆ.5ರಿಂದ 14ರೊಳಗಿನ ಅವಧಿಯಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಮಾಡಿನ ಹೆಂಚು ತೆಗೆದು ಕಳವುಗೈಯಲಾಗಿತ್ತು. ಒಳಪ್ರವೇಶಿಸಿ ಕಳ್ಳರು ಚಿನ್ನಾಭರಣ ಮತ್ತು ನಗದನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಧಿತ ಆರೋಪಿಯಿಂದ ಎರಡು ಚಿನ್ನದ ಉಂಗುರ, ಬೆಳ್ಳಿಯ ಆಭರಣಗಳು, ಟಾರ್ಚ್‌ಲೈಟ್, ಎಂಟು ಸಾವಿರ ರೂ. ನಗದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ., ಪಿಎಸ್ಸೈ ಉಮೇಶ್‌ಕುಮಾರ್ ಹಾಗೂ ಠಾಣಾ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News