ಭಟ್ಕಳ: ಚಿಪ್ಪಿಕಲ್ಲು ಸೇವಿಸಿ ನೂರಾರು ಮಂದಿ ಅಸ್ಪಸ್ಥ; ಆಸ್ಪತ್ರೆಗೆ ದಾಖಲು

Update: 2019-02-19 13:36 GMT

ಭಟ್ಕಳ, ಫೆ. 19: ತಾಲೂಕಿನಾದ್ಯಂತ ಸಮುದ್ರದಲ್ಲಿ ದೊರೆಯುವ ಚಿಪ್ಪಿಕಲ್ಲು (ಮಳವಿ) ಸೇವನೆಯಿಂದಾಗಿ ನೂರಾರು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದ್ದು ರಾಸಾಯನಿಕ ಬೆರೆತಿರುವ ಶಂಕೆಯುಂಟಾದ ಕಾರಣ ಸಾರ್ವಜನಿಕರು ಚಿಪ್ಪಿ ಕಲ್ಲು ಸೇವಿಸಬಾರದೆಂದು ತಾಲೂಕಾಡಳಿತ ಮುನ್ನೆಚ್ಚರಿಕೆಯನ್ನು ನೀಡಿದೆ.

ಕಳೆದ ಎರಡು ದಿನದಿಂದಭಟ್ಕಳ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇಲ್ಲಿನ ಮತ್ಸ್ಯಹಾರಗಳಲ್ಲಿ ಮುಖ್ಯವಾದ ಮಳವಿ (ಚಿಪ್ಪಿಕಲ್ಲು) ತಿಂದು ನೂರಾರು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ರವಿವಾರದಂದು 70ಕ್ಕೂ ಅಧಿಕ ಜನರು ತಾಲೂಕಿನ ಶಿರಾಲಿ, ಮುರ್ಡೇಶ್ವರ ವ್ಯಾಪ್ತಿಯಲ್ಲಿ ಅಸ್ವಸ್ತಗೊಂಡು ಆಸ್ಪತ್ರೆ ಸೇರಿದ್ದಾರೆ.

ಕಳೆದ 2-3 ದಿನಗಳಿಂದ ಚಿಪ್ಪಿಕಲ್ಲು(ಮಳವಿ) ತಿಂದ ಶಿರಾಲಿ ವ್ಯಾಪ್ತಿಯಲ್ಲಿ ನೂರಾರು ಜನರು ಆಸ್ಪತ್ರೆ ಸೇರುತ್ತಿದ್ದರು. ರವಿವಾರ ಸಂಜೆ ಪಟ್ಟಣವೊಂದರಲ್ಲೆ ಮಳವಿ ತಿಂದ ಸುಮಾರು 20ಕ್ಕೂ ಅಧಿಕ ಮಂದಿ ರಾತ್ರಿ ಆಸ್ಪತ್ರೆ ಸೇರಿದ್ದು, ವಾಂತಿ ಬೇದಿಯಿಂದ ಪ್ರಾರಂಭವಾಗಿ ಕೆಲವರಿಗೆ ತಲೆ ಸುತ್ತು ಬಂದು ಅಸ್ವಸ್ಥಗೊಳ್ಳುತ್ತಿದ್ದಾರೆ.

ಶನಿವಾರದಂದು ರಾತ್ರಿ ಶಿರಾಲಿಯ ಒಂದೇ ಕುಟುಂಬದ ಸುಮಾರು 20ಕ್ಕೂ ಅಧಿಕ ಮಂದಿ ಮಳವಿ ತಿಂದು ಆಸ್ಪತ್ರೆ ಸೇರಿದ್ದರು. ತಾಲೂಕಿನ ಮಣ್ಕುಳಿ, ಕಾರಗದ್ದೆ, ಮುಂಡಳ್ಳಿ, ಸರ್ಪನಕಟ್ಟೆ ಸೇರಿದಂತೆ ಮುರ್ಡೇಶ್ವರ, ಶಿರಾಲಿ ಭಾಗದವರೂಕೂಡ ಮಳವಿ ತಿಂದು ನಿತ್ರಾಣಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇನ್ನು ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದ ಮಾಹಿತಿ ಲಭ್ಯವಾಗಿದೆ.  

ತಿಮ್ಮು ನಾಯ್ಕ, ಆಶಾ ನಾಯ್ಕ, ದುರ್ಗಿ ನಾಯ್ಕ, ಲಕ್ಷ್ಮೀ ನಾಯ್ಕ, ದುರ್ಗಪ್ಪಾ ಸೇರಿದಂತೆ ಇತರರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಶಿರಾಲಿ ಆಸ್ಪತ್ರೆಯಲ್ಲಿ ರವಿವಾರದಂದು ಬೆಳಗ್ಗೆ 50-60 ಮಂದಿ ಅಸ್ವತ್ತಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮಳವಿಯಲ್ಲಿ ರಾಸಾಯನಿಕ ಮಿಶ್ರಣದ ಶಂಕೆ:

ಸಮುದ್ರದ ಬಂಡೆಕಲ್ಲು ಬಳಿ, ನದಿಯಲ್ಲಿ ಹೇರಳವಾಗಿ ದೊರಕುವ ಮಳವಿಯನ್ನು ಶೇಖರಿಸಿ ಪ್ಲಾಸ್ಟಿಕ್ ಚೀಲದಲ್ಲಿತುಂಬಿ ಸಮುದ್ರದರೇತಿಯಲ್ಲಿ ಹುದುಗಿ ಇಡುತ್ತಾರೆ.ನಿರ್ದಿಷ್ಟ ದಿನದ ವರೆಗೂ ಬದುಕಿಇರುವ ಮಳವಿ ನಂತರಕೆಡಲುಆರಂಭವಾಗುತ್ತದೆ.ಚಿಪ್ಪೆಯೊಳಗಿನ ಮಾಂಸವೂ ಹಾಳಗದಂತೆ ರಕ್ಷಿಸಲೂರಾಸಾಯನಿಕ ಬಳಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕುಂದಾಪುರದಿಂದ ಪ್ರತಿದಿನ ಬೆಳಿಗ್ಗೆ ತಾಲೂಕಿಗೆ ಚಿಪ್ಪಿಕಲ್ಲು ಸಾಗಾಟ ಆಗುತ್ತಿದ್ದು, ಇಲ್ಲಿನ ವ್ಯಾಪಾರಿಗಳು ಕುಂದಾಪುರದ ವ್ಯಾಪಾರಿಗಳಿಂದ ಖರೀದಿಸಿ, ಸಂಗ್ರಹಿಸಿ ತಾಲೂಕಿನ ಜನರಿಗೆ ಮಾರಾಟ ಮಾಡುತ್ತಿದ್ದಾರೆ. ಚಿಪ್ಪಿಕಲ್ಲಿನ ಸಾಗಾಟದಲ್ಲಿಯೋ ಅಥವಾ ಸಂಗ್ರಹಣೆಯಲ್ಲಿಯೋ ರಾಸಾಯನಿಕ ಬೇರಕೆ ಆಗುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಭೀತಿ ಎದುರಾಗಿದೆ.

ಈ ಬಗ್ಗೆ ಮಾಹಿತಿ ತಿಳಿದು ತಾಲೂಕಾಸ್ಪತ್ರೆಗೆ ತಹಸೀಲ್ದಾರ ವಿ.ಎನ್. ಬಾಡ್ಕರ್ ಬೇಟಿ ನೀಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಘಟನೆಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ ವಿ.ಎನ್. ಬಾಡಕರ್‍ಚಿಪ್ಪಿಕಲ್ಲು ಪಧಾರ್ಥ ಸೇವನೆಯಿಂದ ಜನರು ಆಸ್ಪತ್ರೆ ಪಾಲಾಗುತ್ತಿದ್ದ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಈ ಬಗ್ಗೆ ಅವರ ಭೇಟಿ ಮಾಡಿ ಆರೋಗ್ಯ ವಿಚಾರಿಸಲಾಗಿದೆ. ಈ ಕುರಿತು ಸಂಬಂಧಪಟ್ಟ ಪುರಸಭೆ ಅಧಿಕಾರಿಗಳಿಗೂ ಹಾಗೂ ಪೊಲೀಸ ಇಲಾಖೆ ಪರಿಶೀಲನೆಗೆ ಸೂಚನೆ ನೀಡಿದ್ದೇವೆ. ಕುಂದಾಪುರದಿಂದತಾಲೂಕಿಗೆ ಬರುವಚಿಪ್ಪುಕಲ್ಲನ್ನು ವಶಕ್ಕೆ ಪಡೆದು ಅದನ್ನು ಲ್ಯಾಬ್ ಪರಿಶೀಲನೆಗೆ ಕಳುಹಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ. ಹಾಗೂ ತಾಲೂಕಿನ ಜನರುಚಿಪ್ಪಿ ಕಲ್ಲು  ತಯಾರಿಕಾ ಪಧಾರ್ಥ ಸೇವನೆಯನ್ನು ನಿಲ್ಲಿಸುವಂತೆ ತಾಲೂಕಾಡಳಿತದಿಂದ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News