ಮೂಡುಬಿದಿರೆ: ಆಳ್ವಾಸ್ ನಲ್ಲಿ ರಾಷ್ಟ್ರೀಯ ಸಮ್ಮೇಳನ

Update: 2019-02-19 15:01 GMT

ಮೂಡುಬಿದಿರೆ, ಫೆ. 19: ಆಳ್ವಾಸ್ ಕಾಲೇಜು ಮೂಡಬಿದಿರೆಯ ಜೈವಿಕತಂತ್ರಜ್ಞಾನ ವಿಭಾಗವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಇವರ ಸಹಯೋಗದಲ್ಲಿ  ಫೆ. 23ರಂದು ಆಳ್ವಾಸ್ ಕಾಲೇಜು, ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಒಂದು ದಿನದ ರಾಷ್ಟ್ರೀಯ ಸಮ್ಮೇಳನವು “ಕೆಂಡರಿ ಮೆಟಬೊಲೈಟ್ಸ್ ಆ್ಯಂಡ್ ಹೆಲ್ತ್ ಕೇರ್””ಎಂಬ ಶೀರ್ಷಿಕೆಯಡಿ ನಡೆಯಲಿರುವುದು.

ಈ ಕಾರ್ಯಕ್ರಮವು ಜೈವಿಕತಂತ್ರಜ್ಞಾನ ವಿಭಾಗದ ಹಳೆವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ನಡೆಯಲಿರುತ್ತದೆ. ಈ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಭಾಗದ ಹಳೆ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಸಮ್ಮೇಳನದ ಉದ್ಘಾಟನೆಯನ್ನು ಕೇರಳದ ಸೈಂಟ್ ಗ್ರೆಗೋರಿಯಸ್ ದಂತ ಮಹಾ ವಿದ್ಯಾಲಯದ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಸಿ.ಕೆ.ಕೆ ನಾಯರ್ ಮಾಡಲಿದ್ದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ. ಮೋಹನ್ ಆಳ್ವರು ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಇಲ್ಲಿಯ ಪರಿಸರ ಅಧಿಕಾರಿ ಶ್ರೀ ರಾಜಶೇಖರ ಪುರಾಣಿಕರು ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಹಿಮಾಲಯ ಔಷಧ ಸಂಸ್ಥೆ ಬೆಂಗಳೂರಿನ ಹಿರಿಯ ಸಂಶೋಧನಾ ವಿಜ್ಞಾನಿ ಡಾ. ರಾಘುವೇಂದ್ರ ಪ್ರಹ್ಲಾದ ರಾವ್, ಮಣಿಪಾಲದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾದ್ಯಾಪಕರಾದ ಡಾ. ಮಂಜುನಾಥ ಜೋಶಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರಿನ ಸಹ ಪರಿಸರ ಅಧಿಕಾರಿ ಡಾ. ಮಹೇಶ್ವರಿ ಕುಮಾರಿ ಸಿಂಗ್; ಆಳ್ವಾಸ್ ಕಾಲೇಜಿನ ಈ ವಿಭಾಗದ ಹಳೆ ವಿದ್ಯಾರ್ಥಿಗಳಾದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ರವಿ ಮುಂಡುಗಾರು, ಗುಜರಾತಿನ ಮೆರಿಲ್ ಲೈಪ್ ಸೈನ್ಸ್‍ನ ಡಾ. ಕಿರಣ ಕುಮಾರ್ ಶೆಟ್ಟಿ, ಸುಳ್ಯದ ಮನೋಸಂವೇದದ ಶ್ರೀ ಅಕ್ಷರ ದಾಮ್ಲೆ, ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶ್ರೀ ಚೈತನ್ಯ ಕಾರಂತ ಭಾಗಿಯಾಗಲಿದ್ದಾರೆ.

ಈ ಸಮ್ಮೇಳನವನ್ನು ಕಾಲೇಜುಗಳ ವಿಜ್ಞಾನ ವಿದ್ಯಾರ್ಥಿಗಳಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ವಿಜ್ಞಾನ ಸಂಸ್ಥೆಗಳ ವಿಜ್ಞಾನಿಗಳಿಗೆ ಸಹಕಾರಿಯಾಗುವಂತೆ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಿಂದ ಉಪನ್ಯಾಸದ ಜತೆಗೆ ಮೌಖಿಕ ಸಂಶೋಧನಾ ಪ್ರಬಂಧ ಮಂಡನೆ ಹಾಗೂ ಸಂಶೋಧನಾ ಬಿತ್ತಿಪತ್ರ ಮಂಡನೆ ಇರುವುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರು ಡಾ. ರಾಮ ಭಟ್, ಸಮ್ಮೇಳನ ಸಂಯೋಜಕರು ಹಾಗು ಮುಖ್ಯಸ್ಥರು, ಜೈವಿಕ ತಂತ್ರಜ್ಞಾನ ವಿಭಾಗ, ಆಳ್ವಾಸ್ ಕಾಲೇಜು, ಇವರನ್ನು ಸಂಪರ್ಕಿಸಬಹುದೆಂದು ಕಾಲೇಜು ಪ್ರಕಟಣೆ ತಿಳಿಸಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News