ಜಾತಿಯ ಹೆಸರಲ್ಲಿ ತಾರತಮ್ಯ ಸಲ್ಲ: ಮೋದಿ

Update: 2019-02-19 15:19 GMT

ವಾರಣಾಸಿ,ಫೆ.19: ಭಕ್ತಿಪಂಥದ ಕವಿ ಸಂತ ರವಿದಾಸ್‌ರ ಜನ್ಮದಿನಾಚರಣೆಯ ಅಂಗವಾಗಿ ಮಂಗಳವಾರ ದೇಶದ ಜನತೆಗೆ ಪ್ರಧಾನಿ ನೀಡಿದ ಸಂದೇಶವೊಂದರಲ್ಲಿ ಜಾತಿ ಭೇದವನ್ನು ಕೊನೆಗೊಳಿಸುವಂತೆ ಹಾಗೂ ಸ್ವಹಿತಾಸಕ್ತಿಗಳನ್ನು ಬೆಳೆಸಲು ಯತ್ನಿಸುವವ ಬಗ್ಗೆ ಎಚ್ಚರವಿರುವಂತೆ ಅವರು ಕರೆ ನೀಡಿದ್ದಾರೆ.

ಅವರು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ರವಿದಾಸ್ ಜನ್ಮಸ್ಥಳ ಪ್ರದೇಶ ಅಭಿವೃದ್ಧಿ ಯೋಜನೆಗೆ ಶಿಲಾನ್ಯಾಸ ಮಾಡಿದ ಬಳಿಕ ನಡೆ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಸಾಮಾಜಿಕ ಸಾಮರಸ್ಯವನ್ನು ಸಾಧಿಸುವಲ್ಲಿ ಜಾತಿ ತಾರತಮ್ಯ ಅತಿ ದೊಡ್ಡ ತಡೆಯಾಗಿದೆಯೆಂದು ಅವರು ಅಭಿಪ್ರಾಯಿಸಿದ್ದಾರೆ. ‘‘ ಜಾತಿಯ ಆಧಾರದಲ್ಲಿ ತಾರತಮ್ಯವನ್ನು ಮಾಡಕೂಡದೆಂದು ಗುರೂಜಿ (ಸಂತ ರವಿದಾಸ್) ಹೇಳಿದ್ದಾರೆ. ಜಾತಿ ಭೇದ ಇರುವ ತನಕ ಜನರಿಗೆ ಪರಸ್ಪರ ಸ್ಪಂದಿಸಲಾರರು ಮತ್ತು ಸಾಮಾಜಿಕ ಸಾಮರಸ್ಯ ಹಾಗೂ ಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲ’ಎಂದು ಪ್ರಧಾನಿ ತಿಳಿಸಿದರು.

‘‘ತಮ್ಮ ಸ್ವಾರ್ಥಕ್ಕಾಗಿ, ಜಾತಿ ಭೇದವನ್ನು ಸೃಷ್ಟಿಸುವವರನ್ನು ಹಾಗೂ ಅದಕ್ಕೆ ಉತ್ತೇಜನ ನೀಡುವವರನ್ನು ಗುರುತಿಸಿ’’ ಎಂದು ಮೋದಿ ಯಾರ ಹೆಸರನ್ನೂ ಉಲ್ಲೇಖಿಸದೆ ಹೇಳಿದರು.

ದುರದೃಷ್ಟವಶಾತ್ ಈವರೆಗೆ ದೇಶದಲ್ಲಿ ಜಾತಿ ತಾರತಮ್ಯವನ್ನು ತೊಡೆದುಹಾಕಲು ಸಾಧ್ಯವಾಗಿಲ್ಲ ವೆಂದು ಅವರು ಯುವಜನತೆಯ ನೆರವಿನೊಂದಿಗೆ ನವಭಾರತವು ಈ ಬದಲಾವಣೆಗೆ ಸಾಕ್ಷಿಯಾಗಲಿದೆಯೆಂದು ಅವರು ಭರವಸೆ ವ್ಯಕ್ತಪಡಿಸಿದರು.

15 ಹಾಗೂ 16ನೇ ಶತಮಾನದ ಭಕ್ತಿಚಳವಳಿಯ ಪ್ರವರ್ತಕರಲ್ಲೊಬ್ಬರೆನಿಸಿದ ಸಂತ ರವಿದಾಸ್ ಅವರು ವಾರಣಾಸಿಯಲ್ಲಿ ಜನಿಸಿದ್ದರು. ಅವರ ಭಜನೆಗಳು ಹಾಗೂ ಕವನಗಳಲ್ಲಿ, ಸಾಮಾಜಿಕವಾಗಿ ತನ್ನ ಕೆಳ ಸ್ಥಾನಮಾನದಿಂದಾಗಿ ಅನುಭವಿಸಿದ ಬವಣೆಗಳನ್ನು ಉಲ್ಲೇಖಿಸಿದ್ದರು. ಅವರು ರಚಿಸಿದ ಭಕ್ತಿಗೀತೆಗಳಲ್ಲಿ ಸಿಖ್ಖ್ ಧರ್ಮಗ್ರಂಥಗಳ ಸಾಲುಗಳನ್ನು ಕೂಡಾ ಒಳಗೊಂಡಿದ್ದವು.

ಎಲ್ಲರ ಬಗ್ಗೆಯೂ ಕಾಳಜಿ ವಹಿಸುವಂತಹ ಸಮಾಜವನ್ನು ಸ್ಥಾಪಿಸುವ ಕನಸನ್ನು ಅವರು ಕಂಡಿದ್ದರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯೊಂದಿಗೆ ಕಳೆದ ನಾಲ್ಕೂವರ ವರ್ಷಗಳಲ್ಲಿ ಅವರ ಬೋಧನೆಗಳನ್ನು ಅನುಸರಿಸಲು ಯತ್ನಿಸಿದ್ದೆವು’’ ಎಂದು ಮೋದಿ ತಿಳಿಸಿದ್ದಾರೆ.

ನನ್ನ ಸರಕಾರವು ಶಿಕ್ಷಣ, ಆದಾಯ, ಧರ್ಮ, ವೈದ್ಯಕೀಯ, ನೀರಾವರಿ ಹಾಗೂ ಸಾರ್ವಜನಿಕಸ ಅಹವಾಲುಗಳಿಗೆ ಸ್ಪಂದನೆ ಎಂಬ ನಾಲ್ಕು ಪಂಚಧರ್ಮಗಳ ಬಗ್ಗೆ ತನ್ನ ಸರಕಾರ ಗಮನಹರಿಸಿದೆಯೆಂದು ಅವರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News