‘ಹುತಾತ್ಮ’ ಪದ ಬಳಕೆಗೆ ಮಾದ್ಯಮಗಳಿಗೆ ನಿರ್ದೇಶಿಸಲು ಕೋರಿದ ಮನವಿ ತಿರಸ್ಕರಿಸಿದ ಹೈಕೋರ್ಟ್

Update: 2019-02-19 16:11 GMT

ಹೊಸದಿಲ್ಲಿ, ಫೆ. 19: ಭಯೋತ್ಪಾದನೆ ಅಥವಾ ಇತರ ದಾಳಿಯ ಸಂದರ್ಭ ಭದ್ರತಾ ಸಿಬ್ಬಂದಿ ಸಾವನ್ನು ವರದಿ ಮಾಡುವಾಗ ‘ಹತ್ಯೆಗೈಯಲಾಯಿತು’ ಎಂಬ ಪದ ಬಳಸುವ ಬದಲು ‘ಶಹೀದ್’, ‘ಹುತಾತ್ಮ’ ಎಂಬ ಪದ ಬಳಸಲು ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ದಿಲ್ಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.

2016 ಅಕ್ಟೋಬರ್‌ನಲ್ಲಿ ಒಂದು ಪೀಠ ಈಗಾಗಲೇ ವಿಲೇವಾರಿ ಮಾಡಿದ ಅರ್ಜಿಯ ನೆಲೆಯಲ್ಲೇ ಇನ್ನೊಂದು ಮನವಿ ಸಲ್ಲಿಸಿರುವುದಕ್ಕೆ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾಯಮೂರ್ತಿ ವಿ. ಕಾಮೇಶ್ವರ್ ರಾವ್ ದೂರುದಾರ ಹಾಗೂ ನ್ಯಾಯವಾದಿ ಅಭಿಷೇಕ್ ಚೌಧರಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

 ಮೃತಪಟ್ಟ ಯೋಧರ ಬಗ್ಗೆ ಮುದ್ರಣ ಹಾಗೂ ಎಲೆಕ್ಟ್ರಾನಿಕ್ಸ್ ಮಾದ್ಯಮಗಳು ಗೌರವಯುತವಾದ ಪದ ಬಳಸಲು ನಿರ್ದೇಶನ ನೀಡುವಂತೆ ಕೋರಿ ಚೌಧರಿ ಮನವಿ ಸಲ್ಲಿಸಿದ್ದರು.

ಪರಾಕ್ರಮಿ ಯೋಧರು ಎಂದಿಗೂ ಹತ್ಯೆಯಾಗದೇ ಇರುವುದರಿಂದ ‘ಹುತಾತ್ಮ’ ಪದ ಬಳಸಲು ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ಅವರು ನ್ಯಾಯಾಲಯವನ್ನು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News