ಅಂತ್ಯಕ್ರಿಯೆ ವೇಳೆ ಹುತಾತ್ಮ ಸೈನಿಕನ ಸಂಬಂಧಿಗೆ ಹಲ್ಲೆಗೈದ ಶಾಸಕ

Update: 2019-02-19 16:12 GMT

ಹೊಸದಿಲ್ಲಿ, ಫೆ.19: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಯೋಧ ಮನೋಜ್ ಬೆಹೆರಾ ಅವರ ಅಂತ್ಯಕ್ರಿಯೆ ಸಂದರ್ಭ ಸೈನಿಕನ ಸಂಬಂಧಿಗೆ ಹಲ್ಲೆಗೈದ ಬಿಜು ಜನತಾ ದಳ ಶಾಸಕ ಡೆಬಾಶಿಸ್ ಸಮಂತಾರೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಫೆಬ್ರವರಿ 14ರಂದು ಪುಲ್ವಾಮ ಜಿಲ್ಲೆಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಒಡಿಶಾದ ಮನೋಜ್ ಬೆಹೆರಾ ಹುತಾತ್ಮರಾಗಿದ್ದರು. ಫೆಬ್ರವರಿ 15ರಂದು ರತನ್ಪುರ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.

ಅಂತ್ಯಕ್ರಿಯೆ ಸಂದರ್ಭ ಶಾಸಕ ಸಮಂತಾರಿ ಬೆಹೆರಾರ ಮಾವನನ್ನು ತಳ್ಳಿದ್ದಾರೆ, ಪರಿಣಾಮ ಅವರು ಮೃತದೇಹದ ಸಮೀಪ ಬಿದ್ದಿದ್ದಾರೆ. ಘಟನೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News