ಉಡುಪಿ ಜಿಲ್ಲೆಯ ಎಸ್ಸೈಗಳ ವರ್ಗಾವಣೆ

Update: 2019-02-19 16:22 GMT

ಉಡುಪಿ, ಫೆ.19: ಲೋಕಸಭಾ ಚುನಾವಣೆಯ ನೀತಿ ಸಂಹಿತೆಗೆ ಅನು ಗುಣವಾಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಉಪನಿರೀಕ್ಷಕ (ಪಿಎಸ್‌ಐ) ರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.

ಕುಂದಾಪುರ ಸಂಚಾರ ಠಾಣೆಯ ಪುಷ್ಪಾ ಮುರ್ಡೇಶ್ವರ ಠಾಣೆಗೆ, ಉಡುಪಿ ನಗರ ಠಾಣೆಯ ಅನಂತ ಪದ್ಮನಾಭ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಠಾಣೆಗೆ, ಹೆಬ್ರಿ ಠಾಣೆಯ ಮಹಾಬಲ ಶೆಟ್ಟಿ ಪುತ್ತೂರು ಸಂಚಾರ ಠಾಣೆಗೆ, ಉಡುಪಿ ಸಂಚಾರ ಠಾಣೆಯ ನಾರಾಯಣ ಗಾಣಿಗ ಬೆಳ್ತಂಗಡಿ ಸಂಚಾರ ಠಾಣೆಗೆ, ಕಾಪು ಠಾಣೆಯ ಲಕ್ಷ್ಮಣ್ ಜಿ. ಉಡುಪಿ ನಗರ ಠಾಣೆ(ಅಪರಾಧ)ಗೆ, ಉಡುಪಿ ಮಹಿಳಾ ಠಾಣೆಯ ವೈಲೆಟ್ ಫೆಮಿನಾ ಕುಂದಾಪುರ ಸಂಚಾರ ಠಾಣೆಗೆ, ಹಿರಿಯಡ್ಕ ಠಾಣೆಯ ಸತೀಶ್ ಹೆಬ್ರಿ ಠಾಣೆಗೆ, ಕುಂದಾಪುರ ಠಾಣೆ(ಅಪರಾಧ)ಯ ರಮೇಶ್ ಆರ್. ಪವಾರ್ ಕಾರ್ಕಳ ನಗರ ಠಾಣೆ (ಅಪರಾಧ)ಗೆ, ಕೋಟ ಠಾಣೆಯ ನರಸಿಂಹ ಶೆಟ್ಟಿ ಉಡುಪಿ ನಗರ ಠಾಣೆಗೆ, ಅಜೆಕಾರ್ ಠಾಣೆಯ ಯಾದವ ಎಂ.ಕೆ. ಭಟ್ಕಳ ಗ್ರಾಮಾಂತರ ಠಾಣೆಗೆ, ಅಮಾಸೆಬೈಲು ಠಾಣೆಯ ಶೇಖರ್ ಭಟ್ಕಳ ನಗರ ಠಾಣೆಗೆ ವರ್ಗಾವಣೆ ಗೊಂಡಿದ್ದಾರೆ.

ಅಜ್ಜಂಪುರ ಠಾಣೆಯ ರಫೀಕ್ ಎಂ. ಕೋಟ ಠಾಣೆಗೆ, ಎನ್.ಆರ್.ಪುರ ಠಾಣೆಯ ರವಿ ಎನ್.ಎನ್. ಉಡುಪಿ ನಗರ ಠಾಣೆಗೆ, ಹೊನ್ನಾವರ ಠಾಣೆಯ ಸಂತೋಷ್ ಕಾಯ್ಕಿಣಿ ಹಿರಿಯಡ್ಕ ಠಾಣೆಗೆ, ಕುಮಟಾ ಠಾಣೆಯ ಸುಧಾ ಕುಂದಾಪುರ ಸಂಚಾರ ಠಾಣೆಗೆ, ದಾಂಡೇಲಿ ನಗರ ಠಾಣೆಯ ಉಮೇಶ್ ಪಾವಸ್ಕರ್ ಅಜೆಕಾರು ಠಾಣೆಗೆ, ಉತ್ತರ ಕನ್ನಡ ಜಿಲ್ಲೆಯ ರಾಮನಗರ ಠಾಣೆಯ ಮಂಜುಳಾ ಕುಂದಾಪುರ ಠಾಣೆ (ಅಪರಾಧ), ಕಾರವಾರ ನಗರ ಠಾಣೆಯ ನವೀನ್ ಎಸ್.ನಾಯ್ಕ ಕಾಪು ಠಾಣೆಗೆ, ಸಿದ್ಧಾಪುರ ಠಾಣೆಯ ನಿತ್ಯಾನಂದ ಗೌಡ ಉಡುಪಿ ಸಂಚಾರ ಠಾಣೆ, ಕಾರವಾರ ಠಾಣೆಯ ರೇಖಾ ನಾಯ್ಕಾ ಉಡುಪಿ ಮಹಿಳಾ ಠಾಣೆಗೆ, ದ.ಕ. ಜಿಲ್ಲಾ ಪುಂಜಾಲಕಟ್ಟೆ ಠಾಣೆಯ ಸೌಮ್ಯ ಜಿ. ಅಮಾಸೆಬೈಲು ಠಾಣೆಗೆ, ಕಂಕನಾಡಿ ಠಾಣೆಯ ಜಾನಕಿ ಕಾಪು ಠಾಣೆ(ಅಪರಾಧ)ಗೆ, ಪುತ್ತೂರು ಮಹಿಳಾ ಠಾಣೆಯ ಸೇಸಮ್ಮ ಉಡುಪಿ ಸಂಚಾರ ಠಾಣೆ(ಪಿಎಸ್‌ಐ -2)ಗೆ ವರ್ಗಾವಣೆಗೊಂಡಿದ್ದಾರೆಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News