ಗಂಗೊಳ್ಳಿ: ಎಸ್‌ಡಿಪಿಐಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

Update: 2019-02-19 16:23 GMT

ಗಂಗೊಳ್ಳಿ, ಫೆ.19: ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಹುತಾತ್ಮರಾದ ಸೈನಿಕರಿಗೆ ಎಸ್‌ಡಿಪಿಐ ಗಂಗೊಳ್ಳಿ ಘಟಕದ ವತಿಯಿಂದ ಶ್ರದ್ಧಾಂಜಲಿ ಸಭೆಯನ್ನು ಸೋಮವಾರ ಗಂಗೊಳ್ಳಿಯಲ್ಲಿ ಆಯೋಜಿಸಲಾಗಿತ್ತು.

ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿಯಿಂದ ಅಂಚೆ ಕಚೇರಿವರೆಗೆ ಮೇಣದ ಬತ್ತಿ ಹಿಡಿದು ವೌನ ಮೆರವಣಿಗೆ ನಡೆಸಲಾಯಿತು. ಬಳಿಕ ಅಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಗಂಗೊಳ್ಳಿ ಮೋಹಿದ್ದೀನ್ ಜುಮ್ಮಾ ಮಸೀದಿ ಧರ್ಮಗುರು ಮೌಲಾನಾ ಅಬ್ದುಲ್ ವಹಾಬ್ ನದ್ವಿ ಮಾತನಾಡಿ, ಉಗ್ರರ ಕೃತ್ಯ ಖಂಡನೀಯ. ಅನ್ಯಾಯವಾಗಿ ಇನ್ನೋರ್ವನನ್ನು ಕೊಲ್ಲುವುದು ಮಹಾ ಅಪರಾಧ. ಅದನ್ನು ಇಸ್ಲಾಂ ವಿರೋಧಿಸುತ್ತದೆ. ಹಗಲಿರುಳು ಎನ್ನದೆ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಭಾರತೀಯ ಸೈನಿಕರ ಶ್ರಮ ವ್ಯರ್ಥ ಆಗಬಾರದು ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಗಂಗೊಳ್ಳಿಯ ಜಮಾತ್ ಉಲ್ ಮುಸ್ಲಿಮೀನ್‌ನ ಕಾರ್ಯದರ್ಶಿ ಅಬ್ದುರ್ರಹೀಮ್, ಗಂಗೊಳ್ಳಿ ಠಾಣಾಧಿಕಾರಿ ವಾಸಪ್ಪ ನಾಯ್ಕ್, ಎಸ್‌ಡಿಪಿಐ ಬೈಂದೂರು ಕ್ಷೇತ್ರದ ಅಧ್ಯಕ್ಷ ಲಿಯಾಕತ್ ಕಂಡ್ಲೂರ್, ಪಿಎಫ್‌ಐ ಜಿಲ್ಲಾಧ್ಯಕ್ಷ ಹನೀಫ್ ಗಂಗೊಳ್ಳಿ, ಗ್ರಾಪಂ ಸದಸ್ಯರಾದ ಪರ್ವೀನ್ ಬಾನು, ನಸೀಮ್ ಬಾನು, ತಬರೇಜ್ ಖಲೀಫ, ಸಿದ್ದಿಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News