ಪುಲ್ವಾಮಾ ದಾಳಿ: ಹುತಾತ್ಮ ಯೋಧರ ಸಾಲ ಮನ್ನಾಕ್ಕೆ ಮುಂದಾಗಿದೆ ಈ ಬ್ಯಾಂಕ್

Update: 2019-02-19 17:28 GMT

ಹೊಸದಿಲ್ಲಿ, ಫೆ. 18: ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ನ 23 ಯೋಧರು ತೆಗೆದುಕೊಂಡ ಸಾಲದ ಬಾಕಿಯನ್ನು ಮನ್ನಾ ಮಾಡಲಾಗುವುದು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಸೋಮವಾರ ಹೇಳಿದೆ.

ಹುತಾತ್ಮರಾದ ಸಿಆರ್‌ಪಿಎಫ್‌ನ ಯೋಧರ ಪ್ರತಿ ಕುಟುಂಬಕ್ಕೆ ತಲಾ 30 ಲಕ್ಷ ರೂಪಾಯಿ ವಿಮಾ ಪಾವತಿ ಮಾಡುವ ಪ್ರಕ್ರಿಯೆಯನ್ನು ಕೂಡ ಬ್ಯಾಂಕ್ ತೀವ್ರಗೊಳಿಸಿದೆ.

ರಕ್ಷಣಾ ವೇತನ ಪ್ಯಾಕೇಜ್ ಅಡಿಯಲ್ಲಿ ತನ್ನ ಗ್ರಾಹಕರಾಗಿದ್ದ ಸಿಆರ್‌ಪಿಎಫ್‌ನ ಎಲ್ಲ ಯೋಧರ ಕುಟುಂಬಕ್ಕೆ ತಲಾ 30 ಲಕ್ಷ ರೂಪಾಯಿ ವಿಮೆಯನ್ನು ಬ್ಯಾಂಕ್ ನೀಡಲಿದೆ.

23 ಯೋಧರು ಎಸ್‌ಬಿಐಯಿಂದ ಸಾಲ ಪಡೆದುಕೊಂಡಿದ್ದಾರೆ. ಅವರ ಸಾಲದ ಬಾಕಿ ಇರುವ ಮೊತ್ತವನ್ನು ತತ್‌ಕ್ಷಣ ಜಾರಿಗೆ ಬರುವಂತೆ ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಎಸ್‌ಬಿಏ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News