ಫೆ. 28ರಂದು ದೊಡ್ಡಣಗುಡ್ಡೆ ಉರೂಸ್ ಮುಬಾರಕ್

Update: 2019-02-20 12:05 GMT

ಉಡುಪಿ, ಫೆ.20: ದೊಡ್ಡಣಗುಡ್ಡೆಯ ರಹ್ಮಾನಿಯ್ಯ ಜುಮಾ ಮಸೀದಿ ಹಾಗೂ ದರ್ಗಾ ಸಮಿತಿ ವತಿಯಿಂದ ಬೃಹತ್ ಸ್ವಲಾತ್ ವಾರ್ಷಿಕ ಹಾಗೂ 70ನೆ ಉರೂಸ್ ಮುಬಾರಕ್ ಫೆ.28ರಿಂದ ಮಾ.3ರವರೆಗೆ ನಡೆಯಲಿದೆ.

ಫೆ.28ರಂದು ಅಸರ್ ನಮಾಝಿನ ಬಳಿಕ ಝಿಯಾರತ್ ಹಾಗೂ ಧ್ವಜಾ ರೋಹಣವು ಶೈಖುನಾ ಅಲ್‌ಹಾಜ್ ಪಿ.ಮುಹಮ್ಮದ್ ಬಾಖವಿ ಪೂಂಜಾಲ ಕಟ್ಟೆ ಉಸ್ತಾದರ ನೇತೃತ್ವದಲ್ಲಿ ಜರಗಲಿದೆ. ಇಶಾ ನಮಾಝಿನ ಬಳಿಕ ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ಮದನಿ ಅಲ್‌ಹಾದಿ ತಂಙಳ್ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಮಜ್ಲೀಸ್ ನಡೆಯಲಿದೆ.

ಮಾ.1ರಂದು ಇಶಾ ನಮಾಝ್‌ನ ಬಳಿಕ ನಅತೇ ಶರೀಫ್, 2ರಂದು ಇಶಾ ನಮಾಝ್‌ನ ಬಳಿಕ ಮತ ಪ್ರವಚನ ಹಾಗೂ ಮಾ.3ರಂದು 9ಗಂಟೆಗೆ ವೌಲಿದ್ ಪಾರಾಯಣ ಹಾಗೂ 10ಗಂಟೆಗೆ ಸಂದಲ್ ಮೆರವಣಿಗೆ ನಡೆಯ ಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News