ಉಗ್ರರ ದಾಳಿ: ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಖಂಡನಾ ಸಭೆ

Update: 2019-02-20 13:01 GMT

ಮಂಗಳೂರು, ಫೆ.20: ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಬುಧವಾರ ಸಭೆ ನಡೆಯಿತು.

ಈ ಸಂದರ್ಭ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು. ಇತ್ತೀಚೆಗೆ ನಿಧನರಾದ ಬ್ಯಾರಿ ಆಂದೋಲನದ ರೂವಾರಿ ಅಬ್ದುಲ್ ರಹೀಂ ಟೀಕೆ ಅವರ ಮಗ್‌ಫಿರತ್‌ಗಾಗಿ ಸಭೆಯಲ್ಲಿ ದುಆ ಮಾಡಲಾಯಿತು.

ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಹಾಜಿ ಸಿ. ಮಹ್ಮೂದ್, ಕೆ. ಅಶ್ರಫ್, ಹಾಜಿ ಅಹ್ಮದ್ ಬಾಷಾ ತಂಙಳ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಕಾರ್ಯದರ್ಶಿ ಗಳಾದ ಸಿ.ಎಂ.ಮುಸ್ತಫಾ, ಡಿ.ಎಂ.ಅಸ್ಲಂ, ಹಾಜಿ ಅಹ್ಮದ್ ಬಾವಾ ಪಡೀಲ್, ಅಹ್ಮದ್ ಬಾವಾ ಬಜಾಲ್, ಅಬ್ದುಲ್ ಖಾದರ್ ಬಸ್ತಿಕಾರ್, ಹಾಜಿ ಐ. ಮೊಯ್ದಿನಬ್ಬ, ಎನ್.ಅಬೂಬಕರ್, ಎಂ.ಎ.ಅಶ್ರಫ್, ಸಿಎಂ ಹನೀಫ್, ಸದಸ್ಯರಾದ ಹಾಜಿ ಎಫ್‌ಎ ಖಾದರ್, ಆಲಿಕುಂಞಿ ಪಾರೆ, ನೌಷಾದ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News