ಉಡುಪಿ: 3ನೇ ವಿಶ್ವದಾಖಲೆಗೆ ತನುಶ್ರೀ ಪಿತ್ರೋಡಿ ಪ್ರಯತ್ನ

Update: 2019-02-20 14:02 GMT

ಉಡುಪಿ, ಫೆ. 20: ತನ್ನ ನೃತ್ಯ ಹಾಗೂ ಯೋಗ ಪ್ರತಿಭೆಯ ಮೂಲಕ ಈಗಾಗಲೇ ಎರಡು ವಿಶ್ವ ದಾಖಲೆಗಳನ್ನು ಬರೆದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿರುವ ಉಡುಪಿಯ ಪ್ರತಿಭೆ ತನುಶ್ರೀ ಪಿತ್ರೋಡಿ ಅವರು ಇದೇ ಫೆ.23ರಂದು ಮೂರನೇ ವಿಶ್ವ ದಾಖಲೆಯ ಪ್ರಯತ್ನ ನಡೆಸಲಿದ್ದಾಳೆ ಎಂದು ಕಾರ್ಯಕ್ರಮದ ಆಯೋಜಕರಾದ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 23ರ ಸಂಜೆ 5 ಗಂಟೆಗೆ ಸೈಂಟ್ ಸಿಸಿಲೀಸ್ ಸಮೂಹ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಯೋಗಾಸನ ಭಂಗಿಯೊಂದರಲ್ಲಿ ವಿಶೇಷ ಸಾಧನೆ ಮಾಡಲಿದ್ದಾರೆ.

ಇದರಲ್ಲಿ ಅವರು ‘ಧನುರಾಸನ’ ಭಂಗಿಯಲ್ಲಿ ಒಂದು ನಿಮಿಷದಲ್ಲಿ ಅತೀ ಹೆಚ್ಚು ಬಾರಿ ಸುತ್ತುಬರಲಿದ್ದು ಈ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಮತ್ತೊಮ್ಮೆ ಸ್ಥಾನ ಪಡೆಯಲು ಪ್ರಯತ್ನಿಸಲಿದ್ದಾರೆ ಎಂದರು.

ಈ ಭಂಗಿಯಲ್ಲಿ ಇದುವರೆಗೆ ಯಾರೂ ದಾಖಲೆಗೆ ಪ್ರಯತ್ನಿಸಿಲ್ಲ. ಹೀಗಾಗಿ ತನುಶ್ರೀ ಅವರು ಮಾಡಲಿರುವುದು ಹೊಸ ಸಾಧನೆಯಾಗಿದೆ ಎಂದು ತನುಶ್ರೀ ತಂದೆ ಉದಯಕುಮಾರ್ ತಿಳಿಸಿದರು.ಪಿತ್ರೋಡಿಯ ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ಸ್ ಇವರ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ ಎಂದರು.

10ರ ಹರೆಯದ ಸೈಂಟ್ ಸಿಸಿಲೀಸ್‌ನ ಕನ್ನಡ ಮಾಧ್ಯಮದಲ್ಲಿ ಐದನೇ ತರಗತಿಯಲ್ಲಿ ಕಲಿಯುತ್ತಿರುವ ತನುಶ್ರೀ ಪಿತ್ರೋಡಿ, 2017ರ ನ.11ರಂದು ನೀರಾಲಾಂಭ ಪೂರ್ಣ ಚಕ್ರಾಸನವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೆಸರು ಸ್ಥಾಪಿಸಿದ್ದಳು. ಮುಂದೆ 2018ರ ಎ.7ರಂದು ತನ್ನ ದೇಹದ ಎದೆಯ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ಒಂದು ನಿಮಿಷಕ್ಕೆ 42 ಬಾರಿ ತಿರುಗಿಸುವ (ಮೊಸ್ಟ್ ಫುಲ್ ಬಾಡಿ ರೆವೊಲ್ಯುಶನ್ ಮೈಟೈನಿಂಗ್ ಎ ಚೆಸ್ಟ್ ಸ್ಟಾಂಡ್ ಪೋಸಿಶನ್) ಮೂಲಕ ವಿಶ್ವ ದಾಖಲೆಯನ್ನು ಮಾಡಿದ್ದರು.

10ರ ಹರೆಯದ ಸೈಂಟ್ ಸಿಸಿಲೀಸ್‌ನ ಕನ್ನಡ ಮ್ಯಾಮದಲ್ಲಿಐದನೇತರಗತಿಯಲ್ಲಿಕಲಿಯುತ್ತಿರುವತನುಶ್ರೀಪಿತ್ರೋಡಿ,2017ರನ.11ರಂದುನೀರಾಲಾಂ ಪೂರ್ಣ ಚಕ್ರಾಸನವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೆಸರು ಸ್ಥಾಪಿಸಿದ್ದಳು. ಮುಂದೆ 2018ರ ಎ.7ರಂದು ತನ್ನ ದೇಹದ ಎದೆಯ ಾಗಹಾಗೂತಲೆಯನ್ನುಸ್ಥಿರವಾಗಿಇರಿಸಿಉಳಿದಾಗವನ್ನು ಒಂದು ನಿಮಿಷಕ್ಕೆ 42 ಬಾರಿ ತಿರುಗಿಸುವ (ಮೊಸ್ಟ್ ಫುಲ್ ಬಾಡಿ ರೆವೊಲ್ಯುಶನ್ ಮೈಟೈನಿಂಗ್ ಎ ಚೆಸ್ಟ್ ಸ್ಟಾಂಡ್ ಪೋಸಿಶನ್) ಮೂಲಕ ವಿಶ್ವ ದಾಖಲೆಯನ್ನು ಮಾಡಿದ್ದರು.

ಪತ್ರಿಕಾಗೋಷ್ಠಿಯಲ್ಲಿ ತನುಶ್ರೀ ಪಿತ್ರೋಡಿ, ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್‌ನ ಅಧ್ಯಕ್ಷ ಮಲ್ಲೇಶ್ ಕುಮಾರ್ ಪಿತ್ರೋಡಿ, ಭರತನಾಟ್ಯ ಗುರುಗಳಾದ ರಾಮಕೃಷ್ಣ ಕೊಡಂಚ ಹಾಗೂ ವಿಜಯ ಕೋಟ್ಯಾನ್ ಪಿತ್ರೋಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News