ಫೆ. 22: ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ಅನಾಲಿಸ್ಟ್ 2ಕೆ19’

Update: 2019-02-20 14:38 GMT

ಮಂಗಳೂರು, ಫೆ. 20: ಸಂತ ಅಲೋಶಿಯಸ್ ಕಾಲೇಜಿನ ರಸಾಯನ ಶಾಸ್ತ್ರ ಸಂಘ- ‘ಅಲ್ ಕೆಮಿ’ಯಿಂದ ಸಂತ ಅಲೋಶಿಯಸ್ ರಸಾಯನಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೊಗದೊಂದಿಗೆ ರಾಷ್ಟ್ರಮಟ್ಟದ ಅಂತರ್ ಕಾಲೇಜು ಹಬ್ಬ- ‘ಅನಾಲಿಸ್ಟ್ 2ಕೆ19’ನ್ನು ಫೆ.22ರಂದು ಬೆಳಗ್ಗೆ 9:30ಕ್ಕೆ ಕಾಲೇಜಿನ ಎಲ್.ಎಫ್.ರಸ್ಕಿನ್ಹ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಬೆಂಗಳೂರಿನ ಸಿಂಜಿನಿ ಇಂಟರ್ ನ್ಯಾಶನಲ್‌ನ ಕಮರ್ಶಿಯಲ್ ಮ್ಯಾನ್ಯುಫ್ಯಾಕ್ಚರಿಂಗ್ ಘಟಕದ ಮುಖ್ಯಸ್ಥ ರಂಗರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಲಿದ್ದಾರೆ. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರೋನಾಲ್ಡ್ ನಝರತ್, ಎಲ್‌ಸಿಆರ್‌ಐನ ನಿರ್ದೇಶಕ ಡಾ.ರಿಚರ್ಡ್ ಗೊನ್ಸಾಲ್ವಿಸ್, ‘ಅಲ್ ಕೆಮಿ’ ಸಂಘದ ಅಧ್ಯಕ್ಷೆ ಡಾ.ದಿವ್ಯಾ ಎನ್. ಶೆಟ್ಟಿ, ವಿದ್ಯಾರ್ಥಿ ಸಂಚಾಲಕಿ ಫ್ಲೊರೆನ್ಸಿಅಹೇಜಿಲ್ ಮತ್ತು ಸಹಾಯಕ ಸಂಚಾಲಕಿ ಅಪೂರ್ವ ಮೊದಲಾದವರು ಈ ಸಂದರ್ಭ ಉಪಸ್ಥಿತರಿರುವರು.

ವಿವಿಧ ಪದವಿ ಕಾಲೇಜುಗಳ ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಈ ಹಬ್ಬದಲ್ಲಿ ಭಾಗವಹಿಸಲಿದ್ದಾರೆ. ಐಸ್ ಬ್ರೇಕರ್, ವಿಚಾರ ಸಂಕಿರಣ, ರಸಪ್ರಶ್ನೆ, ವೀಡಿಯೊ ಚಮತ್ಕಾರ, ರಂಗೋಲಿ, ಸಾಕ್ಷಚಿತ್ರ ನಿರ್ಮಾಣ, ಕೊಲಾಜ್, ಮುಖವರ್ಣಿಕೆ, ತಾರಾ ವಿಶ್ಲೇಷಕ- ಮೊದಲಾದ ಸ್ಪರ್ಧೆಗಳು ಈ ಹಬ್ಬದಲ್ಲಿ ನಡೆಯಲಿವೆ.

ಗುಜರಾತ್, ಗೋವಾ, ಕೇರಳ, ಮೈಸೂರು ಮತು ಬೆಂಗಳೂರು ಮೊದಲಾದ ಕಾಲೇಜುಗಳು ಸೇರಿ ಒಟ್ಟು 35 ಕಾಲೇಜುಗಳ ವಿದ್ಯಾರ್ಥಿಗಳು ಈ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಅದೇ ದಿನಸಂಜೆ ಸಮಾರೋಪ ನಡೆಯಲಿದ್ದು, ಎನ್‌ಐಟಿಕೆ ಸುರತ್ಕಲ್‌ನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅರುಣ್ ಎಂ. ಇಸ್ಲೂರ್ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನ ಅನ್ವಯಿಕ ಪ್ರಾಣಿಶಾಸ್ತ್ರದ ನಿರ್ದೇಶಕ ರೆ.ಡಾ. ಲಿಯೋ ಡಿಸೋಜ ಅಧ್ಯಕ್ಷತೆ ವಹಿಸಲಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News