ತ್ವರಿತ ಅಂಗವಿಕಲ ಪತ್ತೆ ಹಚ್ಚುವಿಕೆ ಕೇಂದ್ರ ಸ್ಥಾಪನೆ: ಬಸವರಾಜ್

Update: 2019-02-20 15:43 GMT

ಉಡುಪಿ, ಫೆ.20: ಅಂಗವಿಕಲ ಮಕ್ಕಳಿಗೆ ಒಂದೇ ಸೂರಿನಡಿ ಚಿಕಿತ್ಸೆ ಒದ ಗಿಸುವ ತ್ವರಿತ ಅಂಗವಿಕಲ ಪತ್ತೆ ಹಚ್ಚುವಿಕೆ ಕೇಂದ್ರವನ್ನು ಉಡುಪಿ ಜಿಲ್ಲೆಯಲ್ಲಿ ಶೀಘ್ರವೇ ಆರಂಭಿಸಲಾಗುವುದು ಎಂದು ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.

ಮಣಿಪಾಲದ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈ ಕೇಂದ್ರದಲ್ಲಿ ಮಕ್ಕಳ ತಜ್ಞರು, ಮೂಳೆ ತಜ್ಞರು, ವಾಕ್ ಶ್ರವಣ, ಮನೋ ವೈದ್ಯರು, ದೋಷ ಪತ್ತೆ ತಜ್ಞರು, ಫಿಸಿಯೋ ಥೆರಪಿ ತಜ್ಞರು ಇರಲಿದ್ದು, ಕೇಂದ್ರಕ್ಕೆ ಬರುವ ಮಗುವಿನ ಅಂಗವಿಕಲತೆಯನ್ನು ಪತ್ತೆ ಹಚ್ಚಿ ಅಗತ್ಯ ಚಿಕಿತ್ಸೆ, ತರಬೇತಿ ಮತ್ತು ಪೋಷಕರಿಗೆ ಅಗತ್ಯ ಸಲಹೆಯನ್ನು ನೀಡಲಾಗುವುದು ಎಂದರು.

ಈ ಕೇಂದ್ರವನ್ನು ಉಡುಪಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ತೆರೆಯಲು ಸೂಚಿಸ ಲಾಗಿದ್ದು, ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ಎರಡು ಕಿ.ಮೀ. ವ್ಯಾಪ್ತಿಯೊಳಗೆ ನೋಡುವಂತೆ ಜಿಲ್ಲಾ ಸರ್ಜನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಿಳಿಸಲಾಗಿದೆ. ಇಂತಹ ಕೇಂದ್ರವನ್ನು ರಾಜ್ಯದ 13 ಜಿಲ್ಲೆಗಳಲ್ಲಿ ಈಗಾಗಲೇ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

2011ರ ಜನಗಣತಿ ಪ್ರಕಾರ ಏಳು ವಿಧದ ಅಂಗವಿಕಲತೆಯನ್ನು ಹೊಂದಿ ರುವ 16920 ಮಂದಿ ಉಡುಪಿ ಜಿಲ್ಲೆಯಲ್ಲಿದ್ದಾರೆ. ಇದೀಗ ಗುರುತಿಸಿರುವ 21 ವಿಧದ ಅಂಗವಿಲಕತೆಯನ್ನು ಹೊಂದಿರುವವರು ಸುಮಾರು 25ಸಾವಿರ ಇರಬಹುದೆಂದು ಅಂದಾಜಿಸಲಾಗಿದೆ. ಇವರಿಗೆಲ್ಲರಿಗೂ ಪುನವರ್ಸತಿ ಕಲ್ಪಿಸುವ ಕಾರ್ಯ ಆಗಬೇಕಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೇ ನಮ್ಮ ತಂಡವೊಂದು ಶಾಲೆಗಳಿಗೆ ತೆರಳಿ 0-18ವರ್ಷದೊಳಗಿನ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿ ಕಾಯಿಲೆಯನ್ನು ಗುರುತಿಸಿ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದೆ. ಪ್ರತಿ ಇಲಾಖೆಯಲ್ಲಿ ವಿಕಲಚೇತನರಿಗಾಗಿ ಕಾರ್ಯ ಕ್ರಮಗಳಿದ್ದು, ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.

ರಾಜ್ಯ ಅಂಗವಿಕಲರ ಅಧಿನಿಯಮದ ಸಹಾಯಕ ಆಯುಕ್ತ ಪದ್ಮನಾಭ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಉಪಸ್ಥಿತರಿದ್ದರು.

‘ಅಂಗವಿಕಲ’ ಕಾನೂನಾತ್ಮಕ ಪದ

ಕಾನೂನಿನಲ್ಲಿ ಅಂಗವಿಕಲ ಎಂಬ ಪದ ಇದೆ. ಇದುವೇ ಸರಿಯಾದ ಪದ. ಅದು ಬಿಟ್ಟು ವಿಕಲಚೇತನ ಪದ ಬಳಕೆ ಸರಿಯಲ್ಲ. ಕಾಯಿದೆಯಲ್ಲಿ ಅಂಗ ವಿಕಲ ಎಂಬ ಪದ ಯಾಕೆ ಬಳಸಬೇಕೆಂಬುದು ವಿವರವಾಗಿ ತಿಳಿಸಿದೆ ಎಂದು ಬಸವರಾಜ್ ತಿಳಿಸಿದರು.

ಕರ್ನಾಟಕದಲ್ಲಿರುವ ಇಲಾಖೆಯನ್ನು ಅಂಗವಿಲಕ ಸಬಲೀಕರಣ ಇಲಾಖೆ ಎಂಬುದಾಗಿ ಬದಲಾಯಿಸುವಂತೆ ಶಿಫಾರಸ್ಸು ಮಾಡಲಾಗಿದೆ. ಅದೇ ರೀತಿ ಕೇಂದ್ರದಲ್ಲಿ ಅಂಗವಿಕಲ ಎಂಬುದು ಬರೆದು ಬ್ರಾಕೆಟ್‌ನಲ್ಲಿ ದಿವ್ಯಾಂಗ ಎಂಬು ದಾಗಿ ನಮೂದಿಸಲಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News