ಬರ್ನೀ ಸ್ಯಾಂರ್ಡ್ ಅಮೆರಿದ ಅಧ್ಯಕ್ಷ ಹುದ್ದೆಗೆ ಸ್ಪರ್ಧೆ

Update: 2019-02-20 17:48 GMT

ವಾಶಿಂಗ್ಟನ್, ಫೆ. 20: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಡೆಮಾಕ್ರಟಿಕ್ ಪಕ್ಷದ ಟಿಕೆಟ್‌ಗಾಗಿ ಮತ್ತೊಮ್ಮೆ ಸ್ಪರ್ಧಿಸುವುದಾಗಿ ಸೆನೆಟರ್ ಬರ್ನೀ ಸ್ಯಾಂಡರ್ಸ್ ಮಂಗಳವಾರ ಘೋಷಿಸಿದ್ದಾರೆ.

ಅವರು 2016ರ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಡೆಮಾಕ್ರಟಿಕ್ ಪಕ್ಷದ ಟಿಕೆಟ್‌ಗಾಗಿ ಸ್ಪರ್ಧಿಸಿದ್ದರು. ಆದರೆ, ಅಂದು ಡೆಮಾಕ್ರಟಿಕ್ ಪಕ್ಷದ ಟಿಕೆಟ್ ಪಡೆಯುವಲ್ಲಿ ಹಿಲರಿ ಕ್ಲಿಂಟನ್ ಯಶಸ್ವಿಯಾಗಿದ್ದರು. ಆದರೆ, ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಎದುರು ಅವರು ಪರಾಭವಗೊಂಡಿರುವುದನ್ನು ಸ್ಮರಿಸಬಹುದಾಗಿದೆ.

ಈ ಬಾರಿ ಡೆಮಾಕ್ರಟಿಕ್ ಪಕ್ಷದ ಟಿಕೆಟ್‌ಗಾಗಿ ತೀವ್ರ ಸ್ಪರ್ಧೆ ಎದುರಾಗಿದೆ. ಭಿನ್ನ ಹಿನ್ನೆಲೆಯ ನಾಲ್ವರು ಮಹಿಳೆಯರಾದ ಕಮಲಾ ಹ್ಯಾರಿಸ್, ಎಲಿಝಬೆತ್ ವಾರನ್, ಆ್ಯಮಿ ಕ್ಲೋಬುಕರ್, ಕರ್ಸ್ಟನ್ ಗಿಲಿಬ್ರಾಂಡ್ ಮತ್ತು ತುಳಸಿ ಗ್ಯಾಬರ್ಡ್ ಹಾಗೂ ಆಫ್ರಿಕನ್-ಅಮೆರಿಕನ್ ಸೆನೆಟರ್ ಕೋರಿ ಬುಕರ್ ಮತ್ತು ಹಿಸ್ಪಾನಿಕ್ ಜೂಲಿಯನ್ ಕ್ಯಾಸ್ಟ್ರೊ ಡೆಮಾಕ್ರಟಿಕ್ ಪಕ್ಷದ ಟಿಕೆಟ್‌ಗಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ.

ಇನ್ನೂ ಹಲವರು ಸ್ಪರ್ಧೆಯಲ್ಲಿ ಒಳಗೊಳ್ಳುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News