​44ನೇ ಐಎಎ ವಿಶ್ವ ಕಾಂಗ್ರೆಸ್‌ನಲ್ಲಿ ಕಲ್ಯಾಣ್ ಜ್ಯುವೆಲರ್ಸ್ ಸಂಸ್ಥಾಪಕ ಟಿ.ಎಸ್ ಕಲ್ಯಾಣ ರಾಮನ್‌ಗೆ ಸನ್ಮಾನ

Update: 2019-02-20 18:22 GMT

ಕೊಚ್ಚಿ, ಫೆ. 20: ಭಾರತದ ಅತ್ಯುನ್ನತ ಮತ್ತು ವಿಶ್ವಾಸಾರ್ಹ ಆಭರಣ ಸಂಸ್ಥೆಗಳಲ್ಲಿ ಒಂದಾಗಿರುವ ಕಲ್ಯಾಣ್ ಜ್ಯುವೆಲರ್ಸ್ ಸಂಸ್ಥಾಪಕ ಮತ್ತು ವ್ಯಸ್ಥಾಪನಾ ನಿರ್ದೇಶಕ ಟಿ. ಎಸ್ ಕಲ್ಯಾಣ ರಾಮನ್ ಅವರಿಗೆ 44ನೇ ಐಎಎ ವಿಶ್ವ ಕಾಂಗ್ರೆಸ್‌ನಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಲ್ಯಾಣ್ ಜ್ಯುವೆಲರ್ಸ್ ಆಭರಣ ಮಳಿಗೆಯನ್ನು ಕೇರಳದಲ್ಲಿ ಸ್ಥಾಪಿಸಿ ರಾಷ್ಟ್ರೀಯ ಮತ್ತು ಅಂತರ್‌ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕಲ್ಯಾಣ ರಾಮನ್ ಅವರ ಸಾಧನೆಯನ್ನು ಗುರುತಿಸಿ ಅಂತರ್‌ ರಾಷ್ಟ್ರೀಯ ಜಾಹೀರಾತು ಸಂಸ್ಥೆ ಈ ಪ್ರಶಸ್ತಿಯನ್ನು ನೀಡಿದೆ.

ಕಲ್ಯಾಣ್ ಜ್ಯುವೆಲರ್ಸ್‌ನ ರಾಯಭಾರಿಯಾಗಿರುವ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಲ್ಯಾಣ ರಾಮನ್ ಅವರು, ಕಲ್ಯಾಣ್ ಜ್ಯುವೆಲರ್ಸ್ ಆಭರಣ ಕ್ಷೇತ್ರದಲ್ಲಿ ಮಾಡಿರುವ ಕ್ರಾಂತಿಯನ್ನು ಗುರುತಿಸಿ ನೀಡಲಾಗಿರುವ ಈ ಪ್ರಶಸ್ತಿಯನ್ನು ಸ್ವೀಕರಿಸಲು ಸಂತೋಷವಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಗ್ರಾಹಕರಿಗೆ ಧನ್ಯವಾದ ಸೂಚಿಸಿದ ಕಲ್ಯಾಣರಾಮನ್, ನಮ್ಮ ಮೌಲ್ಯಯುತ ಗ್ರಾಹಕರ ಹೊರತು ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯಿಸಿದರು. ಸಂಸ್ಥೆಯು ಪ್ರತಿಯೊಂದು ಪ್ರದೇಶದಲ್ಲೂ ಆ ಪ್ರದೇಶಕ್ಕೆ ಸಂಬಂಧಪಟ್ಟ ಯಶಸ್ವಿ ವ್ಯಕ್ತಿಗಳನ್ನೇ ಜಾಹೀರಾತು ಗಳಲ್ಲಿ ಬಳಸಿಕೊಂಡಿರುವ ನೀತಿ ಬಹಳ ವಿಶಿಷ್ಟವಾಗಿದ್ದು ಇದರಿಂದ ಸಂಸ್ಥೆಯು ಹೆಚ್ಚಿನ ಜನಪ್ರಿಯತೆ ಪಡೆಯಲು ಸಾಧ್ಯವಾಗಿದೆ. ಪ್ರಾದೇಶಿಕ ಸೆಲೆಬ್ರಿಟಿಗಳಾದ ನಾಗರ್ಜುನ, ಪ್ರಭು, ಶಿವರಾಜ್ ಕುಮಾರ್ ಮತ್ತು ಮಂಜು ವಾರಿಯರ್ ಜೊತೆಗೆ ಅಮಿತಾಬ್ ಬಚ್ಚನ್ ಕಲ್ಯಾಣ್ ಜ್ಯುವೆಲರ್ಸ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News