ಜಮ್ಮು- ಕಾಶ್ಮೀರ: 18 ಪ್ರತ್ಯೇಕವಾದಿ ನಾಯಕರಿಗೆ , 155 ರಾಜಕಾರಣಿಗಳ ಭದ್ರತೆ ವಾಪಸ್

Update: 2019-02-21 08:16 GMT

ಶ್ರೀನಗರ, ಫೆ.21: ಜಮ್ಮು ಮತ್ತು ಕಾಶ್ಮೀರ ಸರಕಾರ 18 ಪ್ರತ್ಯೇಕವಾದಿ  ನಾಯಕರಿಗೆ ಮತ್ತು 155 ರಾಜಕಾರಣಿಗಳಿಗೆ ನೀಡಿದ್ದ ಭದ್ರತೆಯನ್ನು ಸರಕಾರ ಹಿಂಪಡೆದಿದೆ.

ಪುಲ್ವಾಮಾದಲ್ಲಿ ಉಗ್ರನೊಬ್ಬ  ಆತ್ಮಾಹುತಿ ಬಾಂಬ್  ದಾಳಿ ಮೂಲಕ   40 ಯೋಧರನ್ನು   ಬಲಿತೆಗೆದುಕೊಂಡ ಪ್ರಕರಣದ ಬಳಿಕ ಸರಕಾರ ಮಹತ್ವದ ಹೆಜ್ಜೆ ಇರಿಸಿದೆ.

ಸರಕಾರದ ನಿರ್ಧಾರದಿಂದಾಗಿ ಇತ್ತೀಚೆಗೆ ರಾಜಕೀಯ ಸೇರಿದ್ದ ಐಎಎಸ್ ಅಧಿಕಾರಿ   ಶಾ ಫೈಸಲ್ ಅವರಿಗೂ ಭದ್ರತೆಯ ವಿಚಾರದಲ್ಲಿ ಬಿಸಿ ತಟ್ಟಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News