ಕೇರಳದಲ್ಲಿ ದೇಶದ ಮೊಟ್ಟಮೊದಲ ರೋಬೊಟ್ ಸಬ್ ಇನ್‍ಸ್ಪೆಕ್ಟರ್!

Update: 2019-02-21 10:11 GMT

ತಿರುವನಂತಪುರಂ, ಫೆ.21: ಯಾಂತ್ರೀಕರಣದ ನಿಟ್ಟಿನಲ್ಲಿ ದಾಪುಗಾಲಿಟ್ಟಿರುವ ದೇಶದಲ್ಲಿ ಮೊಟ್ಟಮೊದಲ ಹ್ಯುಮನಾಯ್ಡ್ ರೋಬೊಟ್ ಪೊಲೀಸ್ ವ್ಯವಸ್ಥೆಗೆ ಚಾಲನೆ ನೀಡಿದೆ.

ಇಲ್ಲಿರುವ ಕೇರಳ ಪೊಲೀಸ್ ಕೇಂದ್ರ ಕಚೇರಿಗೆ ಭೇಟಿ ನೀಡುವ ಮಂದಿಯನ್ನು ರೋಬೋಟ್ ಪೊಲೀಸ್ ಸ್ವಾಗತಿಸುತ್ತದೆ, ಮಾತ್ರವಲ್ಲದೇ ನೀವು ಎಲ್ಲಿಗೆ ಹೋಗಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತದೆ. ಕೆಪಿ-ಬೋಟ್ ಅನ್ನು ಮುಂಭಾಗದ ಕಚೇರಿ ಕೆಲಸಕ್ಕೆ ನಿಯೋಜಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

ಕೆಪಿ-ಬೋಟ್ ಹೆಸರಿನ ಮೊಟ್ಟಮೊದಲ ರೊಬೋಟ್ ಪೊಲೀಸ್ ವ್ಯವಸ್ಥೆಗೆ ಚಾಲನೆ ನೀಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ದೇಶದಲ್ಲೇ ಮೊದಲ ಬಾರಿಗೆ ರೋಬೊಟ್ ಸೇವೆಯನ್ನು ಪೊಲೀಸ್ ಇಲಾಖೆಯಲ್ಲಿ ನಿಯೋಜಿಸಿಕೊಂಡ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದೇ ಸಂದರ್ಭದಲ್ಲಿ ಸಿಎಂ ರೋಬೋಟ್ ಪೊಲೀಸ್‍ ನಿಂದ ಗೌರವ ರಕ್ಷೆ ಪಡೆದರು. ಪರಿಪೂರ್ಣ ಸೆಲ್ಯೂಟ್‍ನೊಂದಿಗೆ ಕೆಪಿ-ಬೋಟ್ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದೆ. ಈ ಪೊಲೀಸ್ ರೋಬೋಟ್‍ ಗೆ ಸಬ್ ಇನ್‍ಸ್ಪೆಕ್ಟರ್ ದರ್ಜೆ ನೀಡಲಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಮಾಹಿತಿ ಸಂಗ್ರಹಿಸುವ ಸೆನ್ಸಾರ್ ವ್ಯವಸ್ಥೆಯನ್ನು ಇದು ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News