×
Ad

ಫೆ. 22: ಕ್ಯಾಂಪಸ್ ಫ್ರಂಟ್ ವತಿಯಿಂದ 'ಎಜುನೆಕ್ಷ್ಟ್' ಕಾರ್ಯಾಗಾರ

Update: 2019-02-21 16:54 IST

ಮಂಗಳೂರು, ಫೆ. 21: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶ ಪ್ರಕ್ರಿಯೆ ಮತ್ತು ಉನ್ನತ ಶಿಕ್ಷಣದ ಕುರಿತು 'ಎಜುನೆಕ್ಷ್ಟ್ ಎ ಡೋರ್ ಟು ಸೆಂಟ್ರಲ್ ಯುನಿವರ್ಸಿಟಿ' ಕಾರ್ಯಾಗಾರವು ಫೆ. 22ರಂದು ಮಂಗಳೂರಿನ ಸಹೋದಯ ಸಭಾಭವನದಲ್ಲಿ ಮಧ್ಯಾಹ್ನ 3ಕ್ಕೆ  ನಡೆಯಲಿದೆ.

ಕಾರ್ಯಾಗಾರದಲ್ಲಿ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿ ಸದಸ್ಯ ಹಾಗೂ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯದ  ವಿದ್ಯಾರ್ಥಿಯಾಗಿರುವ ಪಿ.ವಿ. ಶುಹೈಬ್ ಮಾರ್ಗದರ್ಶನ ನೀಡಲಿದ್ದಾರೆ.

ಅಧ್ಯಕ್ಷತೆಯನ್ನು ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ  ಫಯಾಝ್ ದೊಡ್ಡಮನೆ ವಹಿಸಲಿದ್ದು ಮುಖ್ಯ ಅತಿಥಿಯಾಗಿ  ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ  ಜೆ.ಎನ್.ಯು ಹಳೆ ವಿದ್ಯಾರ್ಥಿಯಾಗಿರುವ ಡಾ. ಜೋಯ್ಸ್ ಸಬೀನಾ ಲೋಬೋ ಮತ್ತು ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಸಾದಿಕ್ ಭಾಗವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ 7019258081 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News