ಭಟ್ಕಳದ ಗುರುಸುಧೀಂದ್ರ ಕಾಲೇಜ್, ಹುಬ್ಬಳ್ಳಿಯ ಜೆ.ಜೆ.ಕಾಲೇಜ್ ಮಡಿಲಿಗೆ ಚಾಂಪಿಯನ್ ಶಿಪ್

Update: 2019-02-21 12:09 GMT

ಭಟ್ಕಳ, ಫೆ. 21: ಇಲ್ಲಿನ ಅಂಜುಮನ್ ಮಹಾವಿದ್ಯಾಲಯ ಸಂಘಟಿಸಿದ ಕರ್ನಾಟಕ ವಿಶ್ವವಿದ್ಯಾಲಯದ ವಿಭಾಗೀಯ ಮಟ್ಟದ ಶೆಟಲ್‍ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಭಟ್ಕಳದ ಗುರು ಸುಧೀಂದ್ರ ಕಾಲೇಜ್ ಹಾಗೂ ಹುಬ್ಬಳ್ಳಿಯ ಜೆ.ಜೆ. ಕಾಲೇಜ್‍ ಚಾಂಪಿಯನ್ ಶಿಪ್ ಪಟ್ಟವನ್ನು ತಮ್ಮ ಮುಡಿಲಿಗೇರಿಸಿಕೊಳ್ಳುವುದರ ಮೂಲಕ ಕಳೆದ ಎರಡು ದಿನಗಳಿಂದ ಇಲ್ಲಿನ ರೋಟರಿ ಭವನದಲ್ಲಿ ನಡೆಯುತ್ತಿರುವ ವಿಭಾಗೀಯ ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಬುಧವಾರ ಸಂಪನ್ನಗೊಂಡಿತು.

ಪುರುಷ ಹಾಗೂ ಮಹಿಳೆಯರಿಗಾಗಿ ನಡೆದ ಈ ಪಂದ್ಯಾವಳಿಯಲ್ಲಿ ಪುರಷರ ವಿಭಾಗದಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜ್ ಪ್ರಥಮ ಸ್ಥಾನಗಳಿಸಿದ್ದು ಮಹಿಳೆಯರ ವಿಭಾಗದಲ್ಲಿ ಹುಬ್ಬಳ್ಳಿಯ ಜೆ.ಜೆ.ಕಾಲೇಜ್‍ ಆಫ್‍ ಕಾಮರ್ಸ್ ಪ್ರಥಮ ಸ್ಥಾನವನ್ನು ಗಳಿಸುವುದರ ಮೂಲಕ ಚಾಂಪಿಯನ್ ಶಿಪ್ ಪಟ್ಟ ತನ್ನದಾಗಿಸಿಕೊಂಡಿತು.

ಹೊನ್ನಾವರದ ಎಸ್.ಡಿ.ಎಂ. ಕಾಲೇಜ್ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ದ್ವಿತೀಯಾ ಸ್ಥಾನ ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ ಧಾರವಾಡದ ಸಿಎಸ್‍ಐ ಕಾಲೇಜ್‍ ಆಫ್‍ ಕಾಮರ್ಸ್‍ ತೃತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಭಟ್ಕಳದ ಅಂಜುಮನ್ ಮಹಾವಿದ್ಯಾಲಯ ತೃತೀಯಾ ಸ್ಥಾನವನ್ನು ಪಡೆದುಕೊಂಡವು.

ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಅಧ್ಯಕ್ಷತೆಯನ್ನುಅಂಜುಮನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್‍ ರಹೀಮ್‍ ದಾಮೂದಿ ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ಕಾಲೇಜ್ ಬೋರ್ಡ್ ಕಾರ್ಯದರ್ಶಿ ಮೊಹಸಿನ್ ಶಾಬಂದ್ರಿ, ಪ್ರಾಂಶುಪಾಲ ಮುಷ್ತಾಖ್ ಶೇಖ್, ದೈಹಿಕ ಶಿಕ್ಷಣ ನಿದೇರ್ಶಕ ಕೆ. ಕಲೀಮುಲ್ಲಾ, ಸಂಘಟನಾ ಕಾರ್ಯದರ್ಶಿ ಪ್ರೋ. ಎಂ.ಎಂ. ಜಮದಾರ್, ಇಷ್ತಿಯಾಖ್‍ರುಕ್ನುದ್ದೀನ್, ಶ್ರೀನಿವಾಸ್ ಪಡಿಯಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News