ಪುತ್ತೂರು ತಾಲೂಕು ಸಖಾಫಿ ಕೌನ್ಸಿಲ್ ಸಮ್ಮಿಲನ

Update: 2019-02-21 12:52 GMT

ಪುತ್ತೂರು, ಫೆ. 21: ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಪುತ್ತೂರು ತಾಲೂಕು ಸಖಾಫಿ ಕೌನ್ಸಿಲ್ ಸಮ್ಮಿಲನ ಬುಧವಾರ ಪುತ್ತೂರು ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ತಾಲೂಕು ಸಖಾಫಿ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಳ್ತಿಗೆ ಅಧ್ಯಕ್ಷತೆ ವಹಿಸಿದ್ದರು.

ಅಬ್ದುಲ್ ರಹೀಂ ಸಖಾಫಿ ಸಾಜ ಖಿರಾಅತ್ ಪಠಿಸಿದರು. ಅಶ್ರಫ್ ಸಖಾಫಿ ಮಾಡಾವು ಉದ್ಘಾಟಿಸಿದರು. ಜಲೀಲ್ ಸಖಾಫಿ ರೆಂಜ ವಿಷಯ ಮಂಡಿಸಿದರು. ಸಯ್ಯಿದ್ ಸಾಬಿತ್ ತಂಙಳ್ ಸಖಾಫಿ ಪಾಟ್ರಕೋಡಿ, ಎಸ್‍ವೈಎಸ್ ಪುತ್ತೂರು ಸೆಂಟರ್ ಅಧ್ಯಕ್ಷ ಅಶ್ರಫ್ ಸಖಾಫಿ ಸವಣೂರು, ಪುತ್ತೂರು ತಾಲೂಕು ಸಖಾಫಿ ಕೌನ್ಸಿಲ್ ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ರಹ್ಮಾನ್ ಸಖಾಫಿ ಅಮ್ಚಿನಡ್ಕ, ಇಬ್ರಾಹಿಂ ಸಖಾಫಿ ರೆಂಜಲಾಡಿ, ಲತೀಫ್ ಸಖಾಫಿ ಕಾವು, ಎಸ್‍ಎಸ್‍ಎಫ್ ಪುತ್ತೂರು ಡಿವಿಷನ್ ಅಧ್ಯಕ್ಷ ಝುಬೈರ್ ಸಖಾಫಿ ಗಟ್ಟಮನೆ ಮಾತನಾಡಿದರು. ನಂತರ ಪಾರನ್ನೂರು ಉಸ್ತಾದರ ಹೆಸರಿನಲ್ಲಿ ತಹ್ಲೀಲ್ ಹೇಳಿ ಸ್ಮರಿಸಲಾಯಿತು. 

ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಅಧ್ಯಕ್ಷರಾಗಿ ಆಯ್ಕೆಗೊಂಡ ಸಖಾಫಿ ಕೌನ್ಸಿಲ್ ಕಾರ್ಯದರ್ಶಿಯಾಗಿರುವ ಝುಬೈರ್ ಸಖಾಫಿ ಗಟ್ಟಮನೆಯವರನ್ನು ಸಖಾಫಿ ಕೌನ್ಸಿಲ್ ವತಿಯಿಂದ  ಶಾಲು ಹೊದಿಸಿ ಸನ್ಮಾನಿಸಲಾಯಿತು. ಫೆ.23 ಮತ್ತು 24 ದೆಹಲಿ ರಾಮ್‍ಲೀಲಾ ಮೈದಾನದಲ್ಲಿ ನಡೆಯುವ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಯ ಕಾನ್ಫರೆನ್ಸ್‍ನ ಪೋಸ್ಟರ್ ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ಸಖಾಫಿ ಕೌನ್ಸಿಲ್‍ನ ಪ್ರ. ಕಾರ್ಯದರ್ಶಿ ನಾಸಿರ್ ಸಖಾಫಿ ಕಟ್ಟತ್ತಾರು ಸ್ವಾಗತಿಸಿ, ಕೋಶಾಧಿಕಾರಿ ಇಬ್ರಾಹಿಂ ಸಖಾಫಿ ಕಬಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News