×
Ad

ಫೆ. 22ರಿಂದ ಐಸಿಎಸ್‍ಇ ಹತ್ತನೇ ತರಗತಿ ಪರೀಕ್ಷೆ ಆರಂಭ

Update: 2019-02-21 18:30 IST

ಭಟ್ಕಳ, ಫೆ. 21: ಐಸಿಎಸ್‍ಇ ( ಇಂಡಿಯನ್ ಸ್ಕೂಲ್ ಸೆರ್ಟಿಫಿಕೇಟ್ ಎಕ್ಸಾಮಿನೇಶನ್ಸ್) ಸಂಸ್ಥೆ ನಡೆಸುವ ಹತ್ತನೇ ತರಗತಿ ವಾರ್ಷೀಕ ಪರೀಕ್ಷೆಗಳು ಫೆ. 22ರಿಂದ ಆರಂಭವಾಗಲಿದ್ದು, ಭಟ್ಕಳದಲ್ಲಿ ಪ್ರಥಮ ಬಾರಿಗೆ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯೂಶಮ್ಸ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಬೆ.11 ಗಂಟೆಯಿಂದ ಪರೀಕ್ಷೆಗಳು ಆರಂಭಗೊಳ್ಳಲಿವೆ.

ತಾಲೂಕಿನ ಬೈಲೂರು ಪಂಚಾಯತ್ ವ್ಯಾಪ್ತಿಯ ಬೀನಾ ವೈದ್ಯಇಂಟರ್ ನ್ಯಾಶನಲ್ ಸ್ಕೂಲ್ ನ 20 ವಿದ್ಯಾರ್ಥಿಗಳು ಹಾಗೂ ನ್ಯೂ ಶಮ್ಸ್ ಸ್ಕೂಲ್ ನ 29 ವಿದ್ಯಾರ್ಥಿಗಳು ಒಟ್ಟು 49 ವಿದ್ಯಾರ್ಥಿಗಳು ಐಸಿಎಸ್‍ಇ ಪರೀಕ್ಷೆಯನ್ನು ಎದುರಿಸಲಿದ್ದಾರೆ.

ಈ ಪರೀಕ್ಷೆಗಳು ಫೆ.22 ರಿಂದ ಮಾ.25ರ ವರೆಗೆ ನಡೆಯಲಿದೆ ಎಂದು ಐಸಿಎಸ್‍ಇ ಸಂಸ್ಥೆ  ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News