ಕುಂದಾಪುರ: ಉದ್ಯೋಗ ಖಾತ್ರಿ ವೇತನಕ್ಕೆ ಆಗ್ರಹಿಸಿ ಹೋರಾಟ

Update: 2019-02-21 13:29 GMT

 ಕುಂದಾಪುರ, ಫೆ.21: ಅಖಿಲ ಭಾರತ ಕೃಷಿ ಕೂಲಿಕಾರರ ಸಂಘಕ್ಕೆ ಸಂಯೋಜಿಸಲ್ಪಟ್ಟ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ತಾಲೂಕಿನಾದ್ಯಂತ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ಮೂರು ತಿಂಗಳುಗಳಿಂದ ಕೆಲಸಗಾರರು ಮಾಡಿದ ಕೆಲಸಕ್ಕೆ ಕೂಲಿ ಹಣವನ್ನು ಪಾವತಿಸದಿರುವುದನ್ನು ವಿರೋಧಿಸಿ ಹಾಗೂ ಕೂಡಲೇ ತಡೆಹಿಡಿದ ವೇತನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಕೂಲಿಕಾರರು ಇಲ್ಲಿನ ತಾಲೂಕು ಪಂಚಾಯತ್ ಕಚೇರಿ ಎದುರು ಧರಣಿ ನಡೆಸಿದರು.

ಕಳೆದ ಮೂರು ತಿಂಗಳ ವೇತನವನ್ನು ತಡೆಹಿಡಿದಿರುವುದರಿಂದ ಬಡ ಕೂಲಿಕಾರರು ಇದೀಗ ವಸ್ತು:ಶ ಬೀದಿ ಪಾಲಾಗಿದ್ದಾರೆ. ಆದುದರಿಂದ ಈ ಕೂಡಲೇ ತಮಗೆ ಬಾಕಿ ಇರುವ ಕೂಲಿ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸುಮಾರು 500ರಷ್ಟಿದ್ದ ನರೇಗಾ ಕೂಲಿಕಾರರು ತಾಲೂಕು ಪಂಚಾಯತ್ ಕಚೇರಿ ಎದುರು ಧರಣಿ ಕುಳಿತು ಪ್ರತಿಭಟಿಸಿದರು.

ಕಳೆದ ಮೂರು ತಿಂಗಳ ವೇತನವನ್ನು ತಡೆಹಿಡಿದಿರುವುದರಿಂದ ಬಡ ಕೂಲಿಕಾರರು ಇದೀಗ ವಸ್ತು:ಶ ಬೀದಿ ಪಾಲಾಗಿದ್ದಾರೆ. ಆದುದರಿಂದ ಈ ಕೂಡಲೇ ತಮಗೆ ಬಾಕಿ ಇರುವ ಕೂಲಿ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸುಮಾರು 500ರಷ್ಟಿದ್ದ ನರೇಗಾ ಕೂಲಿಕಾರರು ತಾಲೂಕು ಪಂಚಾಯತ್ ಕಚೇರಿ ಎದುರು ರಣಿಕುಳಿತುಪ್ರತಿಟಿಸಿದರು. ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಾರರಿಗೆ ಬಾಕಿ ನಿಂತ ಕೂಲಿ ಹಣವನ್ನು ನಿಯಮಾನುಸಾರ ದಂಡನೆ ಸಹಿತ ಪಾವತಿಸಬೇಕು. 2019ರ ಎಪ್ರಿಲ್ ಆರಂಭದಿಂದಲೇ ಕ್ರಿಯಾಯೋಜನೆ ಸಿದ್ಧಪಡಿಸಿ ಕೂಲಿ ಕೆಲಸ ಕೊಡಬೇಕು. ಉದ್ಯೋಗ ಖಾತ್ರಿ ಕೂಲಿಕಾರರಿಗೆ ದಿನವೊಂದರ 600 ರೂ. ವೇತನ ಹಾಗೂ 250 ದಿನ ಕೆಲಸ ಕೊಡಬೇಕು ಎಂದು ಪ್ರತಿಭಟನಾ ಸಭೆಯಲ್ಲಿ ಘೋಷಣೆ ಕೂಗಿ ಅಧಿಕಾರಿಗಳಿಗೆ ಸಾಮೂಹಿಕ ಮನವಿ ಅರ್ಪಿಸಲಾಯಿತು.

ಇದಕ್ಕೆ ಮೊದಲು ಇಲ್ಲಿನ ಕಾರ್ಮಿಕ ಭವನದಲ್ಲಿ ನರೇಗಾ ಕೆಲಸಗಾರರು ಬೃಹತ್ ಸಮಾವೇಶ ನಡೆಸಿ ಬಳಿಕ ಮೆರವಣಿಗೆ ಮೂಲಕ ತಾಲೂಕು ಪಂಚಾಯತ್ ಕಚೇರಿಗೆ ತೆರಳಿ ಮುತ್ತಿಗೆ ಹಾಕಲಾಯಿತು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಫೆ.27,28ರಂದು ಬೆಂಗಳೂರು ವಿಧಾನ ಸೌಧ ಚಲೋ ಹೋರಾಟ ಹಾಗೂ ರಾಜ್ಯ ಮಟ್ಟದ ಉದ್ಯೋಗ ಖಾತ್ರಿ ಯೋಜನೆ ಕಾರ್ಯಗಾರ ನಡೆಯಲಿದ್ದು, ಇದನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಯು.ದಾಸಭಂಡಾರಿ, ರಾಜೀವ ಪಡುಕೋಣೆ, ನಾಗರತ್ನ ನಾಡ, ಯಶೋಧ ಹೊಯ್ಯಣ, ಸಂಜೀವ ಹೆಮ್ಮಾಡಿ, ಬಾಬಣ್ಣ ಗುಲ್ವಾಡಿ, ಕಮಲ ಶೆಟ್ಟಿಗಾರ ಬಸ್ರೂರು, ಸಿಂಥಿಯಾ, ಬೇಬಿ, ಶ್ಯಾಮಲ, ಶೋಭಾ,ನಾಗರತ್ನ ಮುಂತಾದವರು ಧರಣಿಯಲ್ಲಿ ಭಾಗವಹಿಸಿದ್ದರು.

ಸಿಐಟಿಯು ಜಿಲ್ಲಾ ಮುಖಂಡರಾದ ಕೆ.ಶಂಕರ್, ಬಾಲಕೃಷ್ಣ ಶೆಟ್ಟಿ, ಎಚ್. ವಿಠಲ ಪೂಜಾರಿ ಧರಣಿ ನಿರತರರನ್ನು ಬೆಂಬಲಿಸಿ ಮಾತನಾಡಿದರು. ವೆಂಕಟೇಶ ಕೋಣಿ ಅಧ್ಯಕ್ಷತೆ ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News