ಮಂಚಿ: ಫೆ. 24ರಂದು ಬೃಹತ್ ರಕ್ತದಾನ ಶಿಬಿರ, ಸನ್ಮಾನ, ಗಾಲಿಕುರ್ಚಿ ವಿತರಣೆ ಕಾರ್ಯಕ್ರಮ

Update: 2019-02-21 14:14 GMT

ಬಂಟ್ವಾಳ, ಫೆ. 21: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಮಂಚಿ ಸೆಕ್ಟರ್ ಆಶ್ರಯದಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆಯ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮ ಹಾಗೂ ಗಾಲಿಕುರ್ಚಿ ವಿತರಣೆ ಕಾರ್ಯಕ್ರಮ ಫೆ. 24ರಂದು ಬೆಳಿಗ್ಗೆ 9ಗಂಟೆಗೆ ಮಂಚಿ-ಕುಕ್ಕಾಜೆ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ ತಿಳಿಸಿದ್ದಾರೆ.

ಅವರು ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಸೆಸ್ಸೆಫ್ ಬ್ಲಡ್ ಸೈಬೊ ಇದರ 50ನೇ ರಕ್ತದಾನ ಶಿಬಿರ ಇದಾಗಿದ್ದು, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಶಿಬಿರವನ್ನು ಉದ್ಘಾಟಿಸುವರು.

ಸುನ್ನೀ ಮಹಲ್‍ನ ಅಬೂಬಕರ್ ಲತೀಫಿ ಎಣ್ಮೂರು ದುಆಃ ನೆರವೇರಿಸುವರು. ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ಅಧ್ಯಕ್ಷ ಮುಹಮ್ಮದ್ ಅಸ್ಲಂ ಸಂಪಿಲ ಅಧ್ಯಕ್ಷತೆ ವಹಿಸುವರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಪಿ ಕನ್ಯಾನ, ದಾರುಲ್ ಅಶ್‍ಅರಿಯ್ಯಃದ ಮುಹಮ್ಮದಲಿ ಸಖಾಫಿ ಪ್ರಸ್ತಾವಿಸುವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ, ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಎ.ಎಂ.ಖಾನ್, ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ, ರಾಜೀವ್ ಗಾಂಧಿ ಮೆಡಿಕಲ್ ಯುನಿವರ್ಸಿಟಿ ಬೆಂಗಳೂರು ಇದರ ಸೆನೆಟ್ ಸದಸ್ಯ ಡಾ.ಯು.ಟಿ. ಇಫ್ತಿಕಾರ್ ಅಲಿ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಇರಾ ಗ್ರಾಪಂ ಸಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ಹೇಳಿದರು.

49 ಕ್ಯಾಂಪ್‍ಗಳಲ್ಲಿ 2921 ಯೂನಿಟ್ ರಕ್ತ ಸಂಗ್ರಹ

ಎಸ್ಸೆಸ್ಸೆಫ್ ಬ್ಲಡ್ ಸೈಬೊ ದ.ಕ. ಜಿಲ್ಲಾ ವತಿಯಿಂದ 2017 ಜುಲೈಯಿಂದ 2019 ಫೆಬ್ರವರಿ 17ರವರೆಗೆ ದ.ಕ.ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 49 ಕ್ಯಾಂಪ್‍ಗಳನ್ನು ಮಾಡಲಾಗಿದ್ದು, 2,921 ಯೂನಿಟ್ ರಕ್ತವನ್ನು ಸಂಗ್ರಹ ಮಾಡಲಾಗಿದೆ. ಅದೇ ರೀತಿ 2017 ಜುಲೈ 15ರಿಂದ 2019 ಫೆಬ್ರವರಿ 20ರವೆರೆಗೆ ದ.ಕ.ಜಿಲ್ಲಾ ವಿವಿಧ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗಿರುವ ರೋಗಿಗಳಿಗೆ 3866 ಯೂನಿಟ್ ರಕ್ತವನ್ನು ನೀಡಲಾಗಿದ್ದು, ಉಳಿದಂತೆ ರಕ್ತ ನಿಧಿ ಕೇಂದ್ರದಿಂದ 945 ಯೂನಿಟ್ ರಕ್ತವನ್ನು ಬೇಡಿಕೆಯನ್ವಯ ಹೆಚ್ಚುವರಿಯಾಗಿ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ 1130 ಯೂನಿಟ್, ಮಂಗಳೂರು ಎ.ಜೆ. ಆಸ್ಪತ್ರೆಗೆ 442 ಯೂನಿಟ್, ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ 438, ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ 407 ಯೂನಿಟ್ ಹೀಗೆ ದ.ಕ. ಜಿಲ್ಲೆಯ 41 ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ 3866 ಯೂನಿಟ್ ರಕ್ತವನ್ನು ನೀಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ಎಸ್ಸೆಸ್ಸೆಫ್ ಬ್ಲಡ್ ಸೈಬೊ ಸಂಚಾಲಕ ಇಬ್ರಾಹಿಂ ಕರೀಂ, ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ಅಧ್ಯಕ್ಷ ಅಸ್ಲಂ ಪಂಜಿಕಲ್ಲು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News