ಫೆ.23: ನಾವೂರಿನಲ್ಲಿ ಸೌಹಾರ್ದ ಸಂಗಮ, ರಾಜ್ಯಮಟ್ಟದ ಬುರ್ದಾ ಸ್ಪರ್ಧೆ

Update: 2019-02-21 14:33 GMT

ಮಂಗಳೂರು, ಫೆ. 21: ಮುಹಿಯುದ್ದೀನ್ ಜುಮಾ ಮಸೀದಿ ಮುರ ನಾವೂರು ಇದರ ಅಂಗಸಂಸ್ಥೆಯಾದ ಯಂಗ್‌ಮೆನ್ಸ್ ಅಸೊಸಿಯೇಶನ್ ಮುರ ನಾವೂರು ಇದರ ಆಶ್ರಯದಲ್ಲಿ ರಾಜ್ಯ ಮಟ್ಟದ ಬೃಹತ್ ಬುರ್ದಾ ಸ್ಪರ್ಧೆ ಹಾಗೂ ಸೌಹಾರ್ದ ಸಂಗಮ ಫೆ. 23ರಂದು ಅಪರಾಹ್ನ 3 ಗಂಟೆಗೆ ನಾವೂರು ಮುರ ತಾಜುಲ್ ಉಲಾಮಾ ವೇದಿಕೆಯಲ್ಲಿ ನಡೆಯಲಿದೆ ಎಂದು ಅಲ್ ಮದೀನಾ ಮಂಜನಾಡಿ ಇದರ ಪ್ರಾಧ್ಯಾಪಕ ಅಬ್ದುಲ್ ರಝಾಕ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಬೆಂಗಳೂರು ಸಹಿತ ವಿವಿಧ ಜಿಲ್ಲೆಗಳ 25 ವೃತ್ತಿಪರ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಮುರ ಜುಮಾ ಮಸೀದಿ ಖತೀಬ್ ಮುಹಮ್ಮದ್ ಇಂಬಿಚ್ಚಿಕೋಯ ತಂಙಳ್ ಅಲ್ ಬುಖಾರಿ ನೇತೃತ್ವದಲ್ಲಿ ದುವಾ ನೆರವೇರಿಸಲಿದ್ದು, ಮುರ ಜುಮಾ ಮಸೀದಿಯ ಖತೀಬ್ ಅಬೂಬಕರ್ ಸಿದ್ದೀಕ್ ತಂಙಳ್ ತೀರ್ಥಹಳ್ಳಿ ಉದ್ಘಾಟಿಸಲಿದ್ದಾರೆ.

ಕರ್ನಾಟಕ ಸರಕಾರದ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಮಾಜಿ ಸಚಿವರಾದ ಬಿ. ರಮಾನಾಥ ರೈ, ಗಂಗಾಧರ ಗೌಡ, ಮಾಜಿ ಶಾಸಕರಾದ ವಸಂತ ಬಂಗೇರ, ಎಸ್‌ಡಿಪಿಐಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಹಾಗೂ ಇತರ ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಯಂಗ್‌ಮೆನ್ಸ್ ಅಸೋಶಿಯೇಶನ್ ಅಧ್ಯಕ್ಷ ಮುಹಮ್ಮದ್ ಸಾದಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಬ್ದುಲ್ ರಝಾಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಯಂಗ್‌ಮೆನ್ಸ್ ಅಸೊಸಿಯೇಸನ್ ಮುರ ಇದರ ಅಧ್ಯಕ್ಷ ಮುಹಮ್ಮದ್ ಸಾದಿಕ್, ಸ್ವಾಗತ ಸಮಿತಿ ಅಧ್ಯಕ್ಷ ಅಯ್ಯೂಬ್ ಸಹದಿ, ಕಾರ್ಯದರ್ಶಿ ಮುಹಮ್ಮದ್ ಶರೀಫ್, ಯಂಗ್ ಮೆನ್ಸ್ ಎಸೋಶಿಯೇಶನ್ಸ್ ಪ್ರ.ಕಾರ್ಯದರ್ಶಿ ಅಬೂಬಕರ್ ಕೋಡ್ಲೆ, ಕೋಶಾಧಿಕಾರಿ ಇಬ್ರಾಹೀಂ ಪಿ.ಎ., ಸ್ವಾಗತ ಸಮಿತಿ ಸಂಚಾಲಕ ಶರಫುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News