ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನಿಷೇಧಾಜ್ಞೆ

Update: 2019-02-21 15:09 GMT

ಉಡುಪಿ, ಫೆ. 21: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ.1ರಿಂದ 18ರವರೆಗೆ ನಡೆಯಲಿದ್ದು, ಎಲ್ಲಾ ಪರೀಕ್ಷಾ ದಿನಗಳಂದು ಶಾಂತಿ ಸುವ್ಯವಸ್ಥೆ ಯನ್ನು ಕಾಪಾಡಲು ಹಾಗೂ ಪರೀಕ್ಷೆಗಳು ಸುಗಮವಾಗಿ ನಡೆಯುವಂತಾಗಲು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶ ವೆಂದು ಘೋಷಿಸಿ ಸೆಕ್ಷನ್ 144(1)ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.

ಪರೀಕ್ಷಾ ಕೇಂದ್ರಗಳು: ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ, ಎಂ.ಜಿ.ಎಂ. ಪ.ಪೂ. ಕಾಲೇಜು ಉಡುಪಿ, ಪೂರ್ಣಪ್ರಜ್ಞ ಪ.ಪೂ.ಕಾಲೇಜು ಉಡುಪಿ, ಪೂರ್ಣಪ್ರಜ್ಞ ಪ.ಪೂ. ಕಾಲೇಜು ಅದಮಾರು, ಸಂತ ಮೇರಿ ಪ.ಪೂ. ಕಾಲೇಜು ಶಿರ್ವ, ಎಸ್‌ಎಂಎಸ್ ಪ.ಪೂ.ಕಾಲೇಜು ಬ್ರಹ್ಮಾವರ, ಮಿಲಾಗ್ರಿಸ್ ಪ.ಪೂ.ಕಾಲೇಜು ಕಲ್ಯಾಣಪುರ, ನೇಶನಲ್ ಪ.ಪೂ.ಕಾಲೇಜು ಬಾರ್ಕೂರು, ವಿವೇಕಾ ಪ.ಪೂ.ಕಾಲೇಜು ಕೋಟ, ಎಸ್‌ವಿಎಸ್‌ಪ.ಪೂ.ಕಾಲೇಜು ಕಟಪಾಡಿ, ಸರಕಾರಿ ಪ.ಪೂ.ಕಾಲೇಜು ಹಿರಿಯಡ್ಕ.

ವಿದ್ಯೋದಯ ಪ.ಪೂ.ಕಾಲೇಜು ಉಡುಪಿ, ಸರಕಾರಿ ಪ.ಪೂ.ಕಾಲೇಜು ಕೋಟೇಶ್ವರ, ಸರಕಾರಿ ಪ.ಪೂ. ಕಾಲೇಜು ಬಿದ್ಕಲಕಟ್ಟೆ, ಸರಕಾರಿ ಪಪೂ ಕಾಲೇಜು ಕುಂದಾಪುರ, ಭಂಡಾರ್‌ಕಾರ್ಸ್‌ ಪ.ಪೂ.ಕಾಲೇಜು ಕುಂದಾಪುರ, ಸರಕಾರಿ ಪ.ಪೂ. ಕಾಲೇಜು ನಾವುಂದ, ಸರಕಾರಿ ಪ.ಪೂ.ಕಾಲೇಜು ಬೈಂದೂರು, ಸರಕಾರಿ ಪ.ಪೂ. ಕಾಲೇಜು ಶೀರೂರು, ಸರಕಾರಿ ಪ.ಪೂ.ಕಾಲೇಜು ಹೆಬ್ರಿ, ಸರಕಾರಿ ಪ.ಪೂ. ಕಾಲೇಜು ಕಾರ್ಕಳ, ಎಸ್‌ವಿಟಿ ಪ.ಪೂ.ಕಾಲೇಜು ಕಾರ್ಕಳ, ಶ್ರೀ ಭುವನೇಂದ್ರ ಪ.ಪೂ.ಕಾಲೇಜು ಕಾರ್ಕಳ, ಆರ್.ಎನ್.ಶೆಟ್ಟಿ ಪ.ಪೂ.ಕಾಲೇಜು ಕುಂದಾಪುರ, ಸರಕಾರಿ ಪ.ಪೂ.ಕಾಲೇಜು ವಂಡ್ಸೆ, ಸರಕಾರಿ ಪ.ಪೂ.ಕಾಲೇಜು ಬೈಲೂರು.

ಇಲ್ಲಿ ವಾರ್ಷಿಕ ಪರೀಕ್ಷೆಗಳು ಮುಕ್ತಾಯಗೊಳ್ಳುವವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News