ಹಿರಿಯಡಕ: ಏಡ್ಸ್ ಅರಿವು ಕಾರ್ಯಕ್ರಮ

Update: 2019-02-21 15:18 GMT

ಉಡುಪಿ, ಫೆ.21: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕದ ರೆಡ್‌ರಿಬ್ಬನ್ ಕ್ಲಬ್, ಯುವ ರೆಡ್‌ಕ್ರಾಸ್ ಘಟಕ, ರಾ.ಸೇ.ಯೋಜನಾ ಘಟಕಗಳು, ರೋವರ್ ಮತ್ತು ರೇಂಜರ್ ಘಟಕಗಳ ಸಹಯೋಗದಲ್ಲಿ ಏಡ್ಸ್ ಅರಿವು ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಉಡುಪಿ ಬಿ.ಆರ್.ಶೆಟ್ಟಿ ಆಸ್ಪತ್ರೆಯ ಆಪ್ತ ಸಮಾಲೋಚಕಿ ರೋಶಿನಿ ಡಯಾಸ್ ಅವರು ಏಡ್ಸ್ ಅರಿವು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳು ಎಚ್‌ಐವಿ/ಏಡ್ಸ್‌ನ ಬಗೆಗೆ ಅರಿವನ್ನು ಮೂಡಿಸಿಕೊಳ್ಳುವ ಮೂಲಕ ತಮ್ಮ ಸುತ್ತಮುತ್ತಲಿನ ಜನ ಸಮುದಾಯವನ್ನು ಜಾಗೃತಗೊಳಿಸಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ, ಏಡ್ಸ್ ಅರಿವು ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಕಾರ್ಯಕ್ರಮದಲ್ಲಿ ಏಡ್ಸ್ ಅರಿವಿಗೆ ಸಂಬಂಧ ಪಟ್ಟ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು.

ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಕಾಲೇಜಿನ ವಿದ್ಯಾರ್ಥಿಗಳಾದ ದೀಪಕ್ ಶೆಟ್ಟಿ ಮತ್ತು ಹರ್ಷಿತ್ ಶೆಟ್ಟಿ ಇವರಿಗೆ ಪದಕ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಂಚಾಲಕಿ ಸುಜಯಾ ಕೆ.ಎಸ್., ರಾ.ಸೇ.ಯೋಜನಾಧಿಕಾರಿ ಪ್ರವೀಣ ಶೆಟ್ಟಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರೆಡ್‌ರಿಬ್ಬನ್‌ನ ಸಂಚಾಲಕ ಡಾ.ರಾಘವೇಂದ್ರ ಪಿ.ಕೆ. ಸ್ವಾಗತಿಸಿದರು. ರಾ.ಸೇ. ಯೋಜನಾಧಿಕಾರಿ ಸುಭಾಷ್ ಎಚ್.ಕೆ. ವಂದಿಸಿದರು. ವಿದ್ಯಾರ್ಥಿನಿ ಸಫ್ರೀನಾ ಕ್ವಡ್ರೋಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News