ಪಂಪ್‌ವೆಲ್ ಫ್ಲೈ ಓವರ್ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ: ಆರೋಪ

Update: 2019-02-21 16:53 GMT

ಮಂಗಳೂರು, ಫೆ. 21: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಫ್ಲೈ ಓವರ್‌ನ ಎತ್ತರ 5.5 ಮಿಟರ್ ಎತ್ತರ ಇರಬೇಕು ಎನ್ನುವ ರಾಷ್ಟ್ರೀಯ ಮಾನದಂಡವಿದ್ದರೂ ನಗರದ ಪಂಪ್‌ವೆಲ್ ಪ್ಲೈ ಓವರ್ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ ಇದನ್ನು ಸರಿಪಡಿಸಲು ತಕ್ಷಣ ಕ್ರಮ ಕೈ ಗೊಳ್ಳಲು ಎಂದು ಫೋರಂ ಫಾರ್ ಜಸ್ಟೀಸ್ (ರಿ)ನ ಕಾರ್ಯಾಧ್ಯಕ್ಷ ದಯಾನಾಥ್ ಕೊಟ್ಯಾನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಹಾಲಿ ಪಂಪ್‌ವೆಲ್‌ನಲ್ಲಿ ರಾ.ಹೆ.66ರಲ್ಲಿ ನಿರ್ಮಾಣಗೊಂಡಿರುವ ಫ್ಲೈ ಓವರ್ 4.5 ಮೀಟರ್ ಮಾತ್ರ ಎತ್ತರ ಹೊಂದಿದೆ. ಈ ಬಗ್ಗೆ ಎನ್‌ಎಚ್‌ಎಐಯ ಅಧಿಕಾರಿಗಳನ್ನು ಸಂಪರ್ಕಿಸಿ 5 ಬಾರಿ ಮನವಿ ಮಾಡಲಾಗಿದೆ. ಅವರ ಹೇಳಿಕೆಯ ಪ್ರಕಾರ ನಿರ್ಮಾಣದ ಗುತ್ತಿಗೆಯಲ್ಲಿ 5.25 ಮೀಟರ್ ಎತ್ತರ ನಿರ್ಮಿಸಲು ತಿಳಿಸಲಾಗಿದೆ ಪೂರ್ಣಗೊಳಿಸುವ ಹಂತದಲ್ಲಿ 5 ಮೀಟರ್ ಎತ್ತರ ಆಗುವಂತೆ ಮಾಡಲು ಫ್ಲೈ ಓವರ್ ಬಳಿ ರಸ್ತೆಯನ್ನು ತಗ್ಗಿಸಲಾಗುವುದು ಎಂದು ಉತ್ತರ ನೀಡುತ್ತಿದ್ದಾರೆ. ಆದರೆ ನಿಯಮಾನುಸಾರ 5.5 ಮೀಟರ್ ಎತ್ತರಿಸುವ ವಿಷಯವನ್ನು ಪ್ರಸ್ತಾಪಿಸುವುದಿಲ್ಲ. ಪಂಪ್‌ವೆಲ್ ಬಳಿ ಸಂಪರ್ಕಿಸುವ ಎಲ್ಲಾ ರಸ್ತೆಗಳು ಎತ್ತರದಲ್ಲಿವೆ. ಪಂಪ್‌ವೆಲ್‌ ಬಳಿ ಇನ್ನೂ ತಗ್ಗಿಸಿದಾಗ ಮಳೆಗಾಲದಲ್ಲಿ ಕೃತಕ ನೆರೆಗೆ ಕಾರಣ ವಾಗಬಹುದು. ಈಗಾಗಲೆ ಈ ರೀತಿಯ ಸನ್ನಿವೇಶ ಸೃಷ್ಟಿಯಾಗಿದೆ. ಈ ರೀತಿ ನಿಯಮ ಉಲ್ಲಂಘಿಸಿ ಫ್ಲೈ ಒವರ್ ನಿರ್ಮಿಸಿದರೆ ಅಪಘಾತಕ್ಕೂ ಕಾರಣ ವಾಗಬಹುದು ಈಗಾಗಲೆ ಇದೆ ಪಂಪ್‌ವೆಲ್‌ನಲ್ಲಿ ಕಾಮಗಾರಿ ನಿರ್ಮಾಣವಾದ ಬಳಿಕ ಆರು ಬಾರಿ ವಾಹನಗಳು ಅಪಘಾತಕ್ಕೆ ಈಡಾಗಿದೆ ಎಂದು ದಯಾನಾಥ್ ಕೊಟ್ಯಾನ್ ತಿಳಿಸಿದ್ದಾರೆ.

ಫ್ಲೈ ಓವರ್ ನಿರ್ಮಾಣದ ಸಂದರ್ಭದಲ್ಲೂ ಕೆಲವು ಖಾಸಗಿ ವ್ಯಕ್ತಿಗಳ ಕಟ್ಟಡ ಉಳಿಸಲು ಕೆಲವು ನಿಯಮ ಉಲ್ಲಂಘಿಸಿ ನೇರವಾಗಿದ್ದ ರಸ್ತೆಯನ್ನು ವಕ್ರಗೊಳಿಸಿ ಬದಲಾಯಿಸಲಾಗಿದೆ. ಉಜ್ಜೋಡಿಯಲ್ಲಿ ಅಂಡರ್ ಪಾಸ್ ನಿರ್ಮಿಸುವ ಯೋಜನೆ ಏನಾಗಿದೆ ಎಂದು ಗೊತ್ತಿಲ್ಲ, ಸೋಮೇಶ್ವರ ಉಚ್ಚಿಲದಲ್ಲಿ ಬೃಹತ್ ಖಾಸಗಿ ಪೆಟ್ರೋಲ್ ಕಂಪೆನಿಯ ಪೆಟ್ರೋಲ್ ಪಂಪ್‌ಗಾಗಿ ಸಂಪರ್ಕ ರಸ್ತೆಯನ್ನು ಮಾತ್ರ ನಿರ್ಮಿಸಿ ಇನ್ನೊಂದು ಬದಿಯ ಸಂಪರ್ಕ ರಸ್ತೆಯನ್ನು ನಿರ್ಲಕ್ಷಿಸಲಾಗಿದೆ. ಈ ರೀತಿ ಅಸಮರ್ಪಕ ರೀತಿಯಲ್ಲಿ ನಡೆಯುತ್ತಿರುವ ರಾ.ಹೆ.66ರ ಕಾಮಗಾರಿ ಇನ್ನೂ 6 ತಿಂಗಳಾದರೂ ಪೂರ್ಣಗೊಳ್ಳುವ ಲಕ್ಷಣ ಕಂಡು ಬರುತ್ತಿಲ್ಲ. ಜಿಲ್ಲೆಯಲ್ಲಿ ಕಳೆದ 9 ವರ್ಷದಿಂದ ತಲಪಾಡಿಯಿಂದ ಕುಂದಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಗತಿಯಲ್ಲಿ ಸಾಗಯತ್ತಾ ಬಂದಿದೆ ಇನ್ನೂ 6 ತಿಂಗಳಲ್ಲಿ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ ಎಂದು ವಕ್ತಾರ ಎನ್.ಜಿ.ಮೋಹನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷ ವಾಸುದೇವ ಬೋಳೂರು, ಅಲೆಕ್ಸಾಂಡರ್ ಡಿ ಸೋಜ ಸಲಹೆಗಾರರಾದ ರಾಮಶೇಷ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News