ಮಂಗಳೂರು ಐಸಿಎಐಗೆ ಹೊಸ ಅಧ್ಯಕ್ಷರ ಸಾರಥ್ಯ

Update: 2019-02-21 17:41 GMT

ಮಂಗಳೂರು, ಫೆ.21: ದ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ)ದ ಮಂಗಳೂರು ಶಾಖೆಯ ಮೂರು ವರ್ಷಗಳ ಕಾಲಾವಧಿಗೆ (2019-2022) ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮವು ಇತ್ತೀಚೆಗೆ ಮಂಗಳೂರಿನ ಪಡೀಲ್‌ನ ಐಸಿಎಐ ಭವನದಲ್ಲಿ ಜರುಗಿತು. ಅನಂತ ಪದ್ಮನಾಭ ಕೆ. 2019-2020ರ ಅವಧಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.

ಐಸಿಎಐನ ಮಂಗಳೂರು ಶಾಖೆಯು ದ.ಕ. ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿದ್ದು, ಪ್ರಸ್ತುತ ಈ ಶಾಖೆಯು 600ಕ್ಕೂ ಹೆಚ್ಚಿನ ಸಿಎ ಸದಸ್ಯರು ಹಾಗೂ 2000ಕ್ಕೂ ಹೆಚ್ಚಿನ ಸಿಎ ವಿದ್ಯಾರ್ಥಿಗಳನ್ನು ಹೊಂದಿದೆ. ಶಾಖೆಯು ತನ್ನ ಉತ್ತಮ ಚಟುವಟಿಕೆಗಳಿಂದಾಗಿ ಭಾರತದ ಅತ್ಯಂತ ಉತ್ಸಾಹಭರಿತ ಶಾಖೆಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲ್ಪಟ್ಟಿದೆ.

ನೂತನ ಪದಾಧಿಕಾರಿಗಳು: ಐಸಿಎಐನ ಮಂಗಳೂರು ಶಾಖೆಯ ಉಪಾಧ್ಯಕ್ಷ ಶಾಂತಾರಾಮ್ ನಾಯಕ್, ಕಾರ್ಯದರ್ಶಿ ಸುಬ್ರಮಣ್ಯ ಕಾಮತ್ ಕೆ., ಖಜಾಂಚಿ ಅಬ್ದುರ್ ರೆಹೆಮಾನ್ ಮುಸ್ಬಾ, ಎಸ್‌ಐಸಿಎಎಸ್‌ಎ ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರಸನ್ನ ಶೆಣೈ ಎಂ., ಸದಸ್ಯರಾದ ಗೌತಮ್ ಪೈ ಡಿ., ಗೌತಮ್ ನಾಯಕ್ ಎಂ. ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News